ಅಷ್ಟಕ್ಕೂ ಮೋದಕ ಅಂದ್ರೆ ವಿನಾಯಕನಿಗೆ ಯಾಕ್ ಇಷ್ಟ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ
ಗಣೇಶ ಹಬ್ಬ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಚಿಕ್ಕ ಮಕ್ಕಳಿಗಂತೂ ಸಂಭ್ರಮವೇ ಸಂಭ್ರಮ. ಜೊತೆಗೆ ಗೌರಿಯು ಬರುವುದರಿಂದ ಬಹುತೇಕ ಎರಡೂ ದಿನ ಎಲ್ಲರ ಮನೆಯಲ್ಲಿ ಬಗೆ ಬಗೆಯ ಖಾದ್ಯಗಳನ್ನು ಮಾಡುವುದುಂಟು. ಅಷ್ಟಕ್ಕೂ ಗಣೇಶನನ್ನು ಕುರಿಸುವಾಗ ಅವನಿಗೆ ಮೋದಕವನ್ನು ಏಕೆ ಇಡುತ್ತಾರೆ ಗೊತ್ತ!! ಈ ಬಗ್ಗೆ ತಿಳಿಯೋಣ ಬನ್ನಿ.
ನಮ್ಮ ಹಿಂದೂ ಹಬ್ಬಗಳಲ್ಲಿ ಗಣೇಶನ ಹಬ್ಬ ಕೂಡ ಹೆಚ್ಚು ಮನ್ನಣೆ ಪಡೆದಿರುವ ಹಬ್ಬಗಳ ಪೈಕಿ ಒಂದಾಗಿದೆ. ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಆಚರಣೆ ಮಾಡುತ್ತಾರೆ.
ಎಲ್ಲರಿಗೂ ಗೊತ್ತಿರುವಂತೆ ಪುರಾಣಗಳ ಪ್ರಕಾರ ನಮ್ಮ ಗಣಪನಿಗೆ ಮೋದಕ ಎಂದರೆ ಬಹಳ ಇಷ್ಟ. ಆದ್ದರಿಂದಲೇ ಗಣಪನನ್ನು ಕೂರಿಸಿದ ಮೊದಲ ದಿನವೇ 21 ಮೋದಕಗಳನ್ನು ಸಿದ್ಧಪಡಿಸಿ ಗಣಪನಿಗೆ ಅರ್ಪಣೆ ಮಾಡುತ್ತಾರೆ.
ಪುರಾಣಗಳ ಪ್ರಕಾರ ಗಣೇಶ ಚಿಕ್ಕವನಾಗಿದ್ದಾಗ ಅವರ ಅಜ್ಜಿಯಾದ ಮೀನಾವತಿ ನಿತ್ಯವೂ ಲಡ್ಡುಗಳನ್ನು ಮಾಡಿಕೊಡುತ್ತಿದ್ದರು. ಲಡ್ಡುಗಳನ್ನು ತಿನ್ನುತ್ತಿದ್ದ ಗಣಪನ ಹೊಟ್ಟೆ ದೊಡ್ಡದಾಗುತ್ತ ಹೋಗುತ್ತದೆ. ಆಗ ಲಡ್ಡುಗಳನ್ನು ಹೆಚ್ಚು ಹೆಚ್ಚು ಮಾಡಬೇಕಾದ ಪರಿಸ್ಥಿತಿ ಮೀನಾವತಿಗೆ ಬರುತ್ತದೆ. ಆಗ ಮೋದಕ ಸೃಷ್ಟಿಯಾಗಿತು ಎಂದು ಪುರಾಣ ಹೇಳುತ್ತದೆ.
ಮತ್ತೊಂದು ಕಥೆಯ ಪ್ರಕಾರ ಶಿವನು 21 ಮೋದಕವನ್ನು ಸೇವನೆ ಮಾಡಿ ತೇಗುತ್ತಾರೆ. ಈ ಕಾರಣದಿಂದ ಚೌತಿಯ ದಿನ ಗಣಪನಿಗೆ 21 ಮೋದಕಗಳನ್ನು ನೀಡಲಾಗುತ್ತದೆ ಎಂದು ಕತೆಗಳು ಹೇಳುತ್ತವೆ.


