2024- 25ನೇ ಸಾಲಿನ 14 ವರ್ಷದೊಳಗಿನ ಖಾಸಗಿ ವಲಯ ಕ್ರೀಡಾಮಟ್ಟದ ಕ್ರೀಡೆಯಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯು ಸಮಗ್ರ ಪ್ರಶಸ್ತಿ ಪಡೆಯುವುದರ ಮೂಲಕ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಕ್ರೀಡಾಕೂಟದ ಧ್ವಜಾರೋಹಣವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಯುತ ನಾಗೇಂದ್ರಪ್ಪನವರು ನೆರವೇರಿಸಿದರು. ಹಾಗೂ ತಾಲೂಕ್ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀಯುತ ಪ್ರಭು ರವರು ಕ್ರೀಡಾ ಜ್ಯೋತಿ ಸ್ವೀಕಾರ ಮಾಡಿದರು. ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ಮ್ಯಾನೇಜರ್ ಸಿಸ್ಟರ್ ಟ್ರೀಸಾ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಕ್ರೀಡಾ ಕೂಟ ಸಂಘದ ಅಧ್ಯಕ್ಷರಾದ ಆನಂದ್,ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಎಲಿಜಬೆತ್, ಸಂಪನ್ಮೂಲ ಗಣ್ಯರಾದ CRP ಗಳಾದ ಮಂಜುನಾಥ್, ರಂಗನಾಥ, ಹರೀಶ್, ರಾಜಪ್ಪ ಉಪಸ್ಥಿತರಿದ್ದರು. ಈ ಕ್ರೀಡಾ ಕೂಟಕ್ಕೆ ಭಾಗವಹಿಸಿದ ಸೈಂಟ್ ಮೇರಿಸ್ ಶಾಲೆಯ ಬಾಲಕ ಬಾಲಕಿಯರು ಖೋ ಖೋ, ಥ್ರೋ ಬಾಲ್, ವಾಲಿಬಾಲ್, ಆಟದಲ್ಲಿ ಪ್ರಥಮ ಸ್ಥಾನ.
ಬಾಲಕರ : 200ಮೀ, 400ಮೀ, 600ಮೀ, 4×100 ಮೀ, ಓಟದಲ್ಲಿ ಪ್ರಥಮ, ಎತ್ತರ ಜಿಗಿತ, 600ಮೀ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 100ಮೀ ತೃತೀಯ ಸ್ಥಾನ.
ಬಾಲಕಿಯರು :100ಮೀ,200ಮೀ, 400ಮೀ, 4×100 ಮೀ, ರಿಲೇ ತಟ್ಟೆಎಸೆತ, ಎತ್ತರ ಜಿಗಿತ, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದೆ.
100 ಮೀ, 400ಮೀ, 600ಮೀ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ಬಾಲಕ ಬಾಲಕಿಯರು ಸಮಗ್ರ ಪ್ರಶಸ್ತಿಯನ್ನು ಸೈಂಟ್ ಮೇರಿ ಶಾಲೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಈ ಗೆಲುವಿಗೆ ಕಾರಣೀಭೂತರಾದ ದೈಹಿಕ ಶಿಕ್ಷಕರುಗಳಾದ ನೇಮರಾಜ್, ಶಿವಕುಮಾರ್, ಹರೀಶ್ ರವರಿಗೆ ಹಾಗೂ ಶಾಲಾ ಸಿಬ್ಬಂದಿ ವರ್ಗಕ್ಕೆ, ಆಡಳಿತ ಮಂಡಳಿಗೆ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಎಲಿಜಬೆತ್ ರವರು ನಮ್ಮ ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.