123 ವರ್ಷದ ಮೊಸಳೆಗೆ 10,000 ಮಕ್ಕಳು ! ಹೆನ್ರಿ ಗೆ ಜಾಗತಿಕ ಮನ್ನಣೆ!

Share It

ಮೊಸಳೆಯು ನೀರಿನಲ್ಲಿ ವಾಸ ಮಾಡುವ ಮತ್ತು ಭಯಂಕರವಾದ ಹಲ್ಲುಗಳನ್ನು ಹೊಂದಿರುವ ಪ್ರಾಣಿಯಾಗಿದೆ. ಮೃಗಾಲಯಗಳಲ್ಲಿ ಮೊಸಳೆಯನ್ನು ನೋಡಿರುತ್ತೇವೆ. ದಕ್ಷಿಣ ಆಫ್ರಿಕಾದ ಸ್ಕಾಟ್ಬರ್ಗ್ನಲ್ಲಿರುವ ಕ್ರೋಕ್ವರ್ಲ್ಡ್ ಸಂರಕ್ಷಣಾ ಕೇಂದ್ರದಲ್ಲಿ ಸುಮಾರು 40 ವರ್ಷಗಳಿಂದ ಒಂದು ಮೊಸಳೆ ಇದೆ. ಇದು ಜಗತ್ತಿನ ಅತ್ಯಂತ ವೃದ್ಧ ಮೊಸಳೆ ಎಂಬ ಖ್ಯಾತಿಯನ್ನು ಪಡೆದಿದೆ. ಇದರ ಬಗ್ಗೆ ತಿಳಿಯೋಣ ಬನ್ನಿ.

ಮನುಷ್ಯ ಈ ಭೂಮಿಯ ಮೇಲೆ ಹುಟ್ಟುವುದಕ್ಕೂ ಮುನ್ನ ದೈತ್ಯ ಪ್ರಾಣಿಗಳು ಭೂಮಿಯನ್ನು ಆಳುತ್ತಿದ್ದವು. ಸದ್ಯ ಈಗಿರುವ ಪ್ರಾಣಿಗಳು ಅವುಗಳ ಜಾತಿಯ ಮುಂದುವರೆದ ಭಾಗಗಳು. ಮತ್ತು ಅವು ಆಗಿನ ಕಾಲದಲ್ಲಿ ಇದ್ದ ದೇಶದ ಗಾತ್ರ ಕಾಲಾಂತರದಲ್ಲಿ ಬದಲಾಗುತ್ತಿದೆ ಎಂದು ಹೇಳುತ್ತಾರೆ.

123 ವರ್ಷ ವಯಸ್ಸಾಗಿರುವ ಈ ಮೊಸಳೆ 16 ಡಿಸೆಂಬರ್ 1900 ರಂದು ಬೋಟ್ಸ್ವಾನಾದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಒಕಾವಾಂಗೊ ಡೆಲ್ಟಾದಲ್ಲಿ ಜನಿಸಿತು. ಸದ್ಯ ಜಗತ್ತಿನ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಇದರಿಂದಾಗಿ 6 ಮೊಸಳೆಗಳಿಂದ ಬರೋಬ್ಬರಿ 10,000 ಕ್ಕೂ ಹೆಚ್ಚು ಮರಿಗಳಿಗೆ ತಂದೆಯಾಗಿದೆ. ಈ ಮೊಸಳೆಯು ಬರೋಬ್ಬರಿ 16 ಅಡಿ ಉದ್ದ ಹಾಗೂ 700 ಕೆಜಿ ತೂಕವನ್ನು ಹೊಂದಿದೆ.

ಈ ಮೊಸಳೆಗೆ ಹೆನ್ರಿ ಎಂಬ ಹೆಸರನ್ನು ಇಡಲಾಗಿದೆ. ಈ ಹೆಸರು ಇಡಲು ಕಾರಣ ಹೆನ್ರಿ ಎಂಬ ಭೇಟೆಗಾರನಿಗೆ ಈ ಮೊಸಳೆಯನ್ನು ಕೊಲ್ಲಲು ಹೇಳಾಗಿತ್ತು. ಆದರೆ ಅವನು ಈ ಮೊಸಳೆಯನ್ನು ಜೀವಂತವಾಗಿ ಇಡಿದು ಮೃಗಾಲಯಕ್ಕೆ ನೀಡಿದ್ದರಿಂದ ಇದಕ್ಕೆ ಹೆನ್ರಿ ಎಂಬ ಹೆಸರು ಇಡಲಾಗಿತ್ತು.

ಈ ಮೊಸಳೆಯು ಸಹರಾ ಮರುಭೂಮಿಯ 26 ದೇಶಗಳಲ್ಲಿ ಕಂಡುಬರುವ ನೈಲ್ ಜಾತಿಗೆ ಸೇರಿದ ಮೊಸಳೆಯಾಗಿದೆ. ಈ ಜಾತಿಯ ಮೊಸಳೆಯು ಭೇಟೆ ಯಾಡುವುದರಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ.


Share It

You May Have Missed

You cannot copy content of this page