ಮೈಸೂರು :ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡದೆ ಡಿಡಿಪಿಐ ವಿಪರೀತ ನಗೆಪಾಟಲಿಗೆ ಈಡಾದರು.
ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮ ಈ ಘಟನೆ ಸಾಕ್ಷಿಯಾಗಿದೆ.
ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆಯೇ ಎಂದು ಸಿಎಂ ಕೇಳಿದ ಪ್ರಶ್ನೆಗೆ ಹೂಂ ಸಾರ್-ಇಲ್ಲ ಸಾರ್ ಎಂದು ಉತ್ತರಿಸಿದರು. ನಿಮ್ಮ ಮಾತನ್ನು ಖಾಸಗಿ ಶಾಲೆಗಳವರು ಕೇಳುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಸಾರ್ ಎಂದು ಡಿಡಿಪಿಐ ಉತ್ತರಿಸಿದ್ದಕ್ಕೆ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಯಾವುದಾದರೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಾ ಎಂದು ಸಿಎಂ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಡಿಡಿಪಿಐ ತಡಬಡಾಯಿಸಿದರು. ಆಗ ಮುಖ್ಯಮಂತ್ರಿಗಳೇ ಯಾವುದೇ ಒಂದು ಸ್ಕೂಲ್ ಹೆಸರು ಹೇಳಪ್ಪಾ ಹೋಗ್ಲಿ ಎಂದರು. ಆಗಲೂ ಸಭೆ ನಗೆಗಡಲಲ್ಲಿ ತೇಲಿತು. ಬೇಸತ್ತ ಮುಖ್ಯಮಂತ್ರಿಗಳು ನೀವು ಕಷ್ಟಪಟ್ಟು ಓದಿದ್ದೀರಾ ಎಂದು ಕೇಳಿದರೆ, ಇಲ್ಲ ಸಾರ್ ಎನ್ನುವ ಉತ್ತರ ಡಿಡಿಪಿಐ ಅವರಿಂದ ಬಂತು. ಆಗಲೂ ಸಭೆ ನಗೆ ಗಡಲಲ್ಲಿ ತೇಲಿತು.
ಕೊನೆಗೆ ಒಂದು ವಾರದಲ್ಲಿ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಖಡಕ್ ಆಗಿ ಡಿಸಿಪಿಐಗೆ ಸಿಎಂ ಸೂಚನೆ ನೀಡಿದರು.
ಗ್ರೇಸ್ ಮಾರ್ಕ್ಸ್ ಇಲ್ಲದೆ ಎಸ್ಎಸ್ಎಲ್ಸಿ ಯಲ್ಲಿ ಉತ್ತಮ ಫಲಿತಾಂಶ ತರುವ ದಿಕ್ಕಿನಲ್ಲಿ ಎಲ್ಲಾ ಬಿಇಒ ಗಳ ಜೊತೆ ಸಭೆ ನಡೆಸಬೇಕು.
ಸ್ಪೆಷಲ್ ಕೋಚಿಂಗ್ ಕೊಟ್ಟು ಹಿಂದುಳಿದಿರುವ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಸರಣಿ ಪರೀಕ್ಷೆಗಳು ಸೇರಿದಂತೆ ಹಲವು ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಗ್ರೇಸ್ ಮಾರ್ಕ್ಸ್ ಇಲ್ಲದೆ ಫಲಿತಾಂಶದ ಪ್ರಮಾಣ ಹೆಚ್ಚುವಂತೆ ಕೆಲಸ ಮಾಡಿ ಡಿಡಿಪಿಐ ಗೆ ಸಿಎಂ ಸೂಚಿಸಿದರು