ಉಪಯುಕ್ತ ಸುದ್ದಿ

ಜಪಾನ್ ನ ಜನರ ನಡವಳಿಕೆ ವಿಶ್ವಕ್ಕೆ ಮಾದರಿ! ಅಷ್ಟಕ್ಕೂ ಅವರ ಗುಣಗಳು ಯಾವುವು?

Share It

ಜಪಾನ್ ಎಂದರೆ ತಕ್ಷಣ ನೆನಪಾಗುವುದು ಮಹಾಯುದ್ಧಗಳು. ಎರಡನೇ ಮಹಾಯುದ್ಧದಲ್ಲಿ ಜಪಾನ್ ನ ಮೇಲೆ ಅಮೆರಿಕ ಅಣು ಬಾಂಬ್ ಅನ್ನು ಹಾಕಿತು. ಜಪಾನ್ ಮಾತ್ರ ಅದಕ್ಕೆ ಪ್ರತಿಯಾಗಿ ಕೆಲವೇ ವರ್ಷಗಳಲ್ಲಿ ವಿಶ್ವದ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಅಭಿವೃಧ್ದಿ ಹೊಂದಿತು.

ಅಷ್ಟಕ್ಕೂ ಜಪಾನ್ ವೇಗವಾಗಿ ಅಭಿವೃದ್ಧಿ ಹೊಂದಲು ಅಲ್ಲಿನ ಜನರ ಪರಿಶ್ರಮ ಮತ್ತು ದೇಶ ಪ್ರೇಮವೇ ಮುಖ್ಯ
ಕಾರಣ ಎಂದು ಹೇಳಬಹುದು. ಆ ದೇಶದ ಜನರ ಗುಣ ಮತ್ತು ವಿಶೇಷತೆಗಳನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.

ಇತರರನ್ನು ಗೌರವಿಸುವ ಗುಣ : ಜಪಾನಿನ ಜನರು ಇತರರನ್ನು ಹೆಚ್ಚು ಗೌರವದಿಂದ ಕಾಣುತ್ತಾರೆ. ಅವರು ಯಾವ ಮಟ್ಟದಲ್ಲೇ ಇರಲಿ ಅವರನ್ನು ಗೌರವಿಸುವ ಗುಣವನ್ನು ಹೊಂದಿರುತ್ತಾರೆ.

ಶಿಸ್ತು: ಜಪಾನಿನ ಜನರು ತಮ್ಮ ಕೆಲಸ ಕಾರ್ಯದಲ್ಲಿ ಬದ್ಧತೆಯನ್ನು ಹೊಂದಿರುತ್ತಾರೆ. ಅವರು ತಮ್ಮ ಕೆಲಸವನ್ನು ಹೆಚ್ಚು ಪರಿಶ್ರಮದಿಂದಾಗಿ ಮಾಡುತ್ತಾರೆ. ತಾಂತ್ರಿಕವಾಗಿ ಹೆಚ್ಚು ಜ್ಞಾನವನ್ನು ಜಪಾನಿಯರು ಹೊಂದಿರುತ್ತಾರೆ.

ಆವಿಷ್ಕಾರಿಗಳು: ಜಪಾನಿನ ಜನರು ಪ್ರಾಚೀನ ಕಾಲದಿಂದಲೂ ಹೆಚ್ಚು ಆವಿಷ್ಕಾರಿಗಳು ಎಂದು ಗುರುತಿಸಿಕೊಂಡಿದ್ದಾರೆ. ಜಗತ್ತಿಗೆ ಎಲೆಕ್ಟ್ರಾನಿಕ್ಸ್ ಬಿಡಿ ಭಾಗಗಳನ್ನು ಜಪಾನ್ ಸರಬರಾಜು ದೇಶವಾಗಿದೆ.

ಏಕಾಗ್ರತೆ : ಮನುಷ್ಯನಿಗೆ ಏಕಾಗ್ರತೆ ಬಹಳ ಮುಖ್ಯ . ಒಂದು ಕೆಲಸವನ್ನು ಸಂಪೂರ್ಣವಾಗಿ ಮಾಡಲು ಏಕಾಗ್ರತೆ ಇರಲೇ ಬೇಕು. ಅದು ಜಪಾನ್ ಜನರಲ್ಲಿ ಇದೆ. ಅವರು ಸಣ್ಣ ವಿಷಯವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಗುಣಮಟ್ಟದ ವಿಷಯದಲ್ಲಿ ಅವರು ಜಗತ್ತಿನ ನಂ ಓನ್ ಎಂದು ಹೇಳಬಹುದು.

ಮೌಲ್ಯಯುತ ಜೀವನ: ಇವರು ತಮ್ಮ ಧ್ಯೇಯ ಮತ್ತು ಗುರಿ ಸಾಧನೆಗೆ ಎಂತಹ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ.

ಸ್ವಚ್ಚತೆಗೆ ಮೊದಲ ಆದ್ಯತೆ : ಸದ್ಯ ವಿಶ್ವದಲ್ಲಿ ಸ್ವಚ್ಛತೆಯ ಬಗ್ಗೆ ಭಾರಿ ಚರ್ಚೆಗಳು ಆಗುತ್ತಿವೆ. ಇಂದು ವಿಶ್ವದಿಂದ ಸಾವಿರಾರು ಟನ್ ಗಳಷ್ಟು ಪ್ಲ್ಯಾಸ್ಟಿಕ್ ಒಂದು ದಿನದಲ್ಲಿ ಉತ್ಪಾದನೆಯಾಗುತ್ತಿದೆ. ಇದು ಪರಿಸರಕ್ಕೆ ದೊಡ್ಡ ಮಾರಕವಾಗಿದೆ. ಜಪಾನ್ ದೇಶದವರು ತಮ್ಮ ಸುತ್ತ ಮುತ್ತಲಿನ ಸ್ಥಳವನ್ನು ಸ್ವಚ್ಚವಾಗಿಡಲು ಬಯಸುತ್ತಾರೆ. ಅವರು ಕಸವನ್ನು ಮರು ಬಳಕೆ ಮಾಡುವ ಹೊಸ ಪ್ರಯೋಗಗಳನ್ನು ನಡೆಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ.


Share It

You cannot copy content of this page