ಬೆಂಗಳೂರು: ಬಿಟಿಎಂ ವಾರ್ಡಿನ ಬಿಟಿಎಂ ಲೇಔಟ್ 2ನೇ ಹಂತದ 7ನೇ ಮೇನ್, 16ನೇ ಮೇನ್ ರಸ್ತೆಗಳನ್ನು ಡಾಂಬರೀಕರಣ ಮತ್ತು ಮಡಿವಾಳ ಕೆರೆ ರಸ್ತೆ ಅಗಲೀಕರಣ ಕಾಮಗಾರಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪೂಜೆ ನೆರವೇರಿಸಿದರು.
ಅನಂತರ ನಡೆದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಸಾಮಾಜಿಕ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಬಿಟಿಎಂ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಒಂಟಿ ಮನೆ ನಿರ್ಮಾಣಕ್ಕಾಗಿ ತಲಾ 5 ಲಕ್ಷ ರೂ. ಮೊತ್ತದ 38 ಕಾರ್ಯ ಆದೇಶಗಳನ್ನು ವಿತರಿಸಲಾಯಿತು.

ಈ ವರ್ಷ ಸುಮಾರು 100 ಮಂದಿ ಮತ್ತಷ್ಟು ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ಅವರಿಗೂ ಕಾರ್ಯದೇಶ ಪತ್ರ ವಿತರಿಸಲಾಗುವುದು. ಎಲ್ಲಾ ಮಾಜಿ ಕಾರ್ಪೊರೇಟರ್ಗಳು, ಬ್ಲಾಕ್ ಮತ್ತು ವಾರ್ಡ್ ಅಧ್ಯಕ್ಷರು, ಬಿಟಿಎಂ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು, ಸಹಾಯಕ ಎಂಜಿನಿಯರ್ಗಳು ಮತ್ತು ಬಿಟಿಎಂ ವಿಧಾನಸಭೆಯ ಎಲ್ಲಾ ಮುಖಂಡರು ಹಾಜರಿದ್ದರು.

