ರಾಜಕೀಯ ಸುದ್ದಿ

‘ಬೇಗ ಹಿಡಿದ್ರೆ ಬೇಗ ಅಂತೀರಾ, ತಡವಾದ್ರೆ ಇನ್ನೂ ಹಿಡಿದಿಲ್ಲ ಅಂತೀರಾ, ಬಿಜೆಪಿಗರೆ ನೀವ್ ಯಾಕಿಂಗೆ?

Share It

ಧಾರವಾಡ: ಬೇಗ ಅರೆಸ್ಟ್ ಮಾಡಿದ್ರೆ ಇಷ್ಟು ಬೇಗ ಯಾಕ್ ಅರೆಸ್ಟ್ ಅಂತೀರಾ? ತಡವಾದ್ರೆ, ಸರಕಾರ ಅರೆಸ್ಟ್ ಮಾಡಲು ವಿಫಲವಾಗಿದ್ರೆ ಅಂತೀರಾ, ಇದೆಂತ ನಡವಳಿಕೆ ನಿಮ್ಮದು ಎಂದು ಬಿಜೆಪಿ ನಾಯಕರಿಗೆ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.

ಮುನಿರತ್ನ ಬಂಧನಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಮುನಿರತ್ನ ಜಾತಿ ನಿಂದನೆ ಮತ್ತು ಜೀವಬೆದರಿಕೆ ಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸರು ಅದಕ್ಕೆ ಅಗತ್ಯವಾದ ಕ್ರಮ ತೆಗೆದುಕೊಂಡಿದ್ದಾರೆ. ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಒಬ್ಬ ಜನಪ್ರತಿನಿಧಿ ಮಾತನಾಡಲು ಯೋಗ್ಯವಲ್ಲದ ಮಾತುಗಳನ್ನು ಮುನಿರತ್ನ ಮಾತನ್ನಾಡಿದ್ದಾರೆ. ಇದು ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಶೋಭೆ ತರುವ ಹೇಳಿಕೆಗಳಲ್ಲ. ಹೀಗಾಗಿ, ಅವರ ಬಂಧನ ನ್ಯಾಯಬದ್ಧವಾಗಿದೆ ಎಂದರು.

ಪೊಲೀಸರು ಅಗತ್ಯದ ಅನುಗುಣ ಬಂಧನ ಮಾಡಿದ್ದಾರೆ. ಆದರೆ, ತಡವಾಗಿ ಬಂಧಿಸಬೇಕಿತ್ತು ಎಂಬುದು ಬಿಜೆಪಿ ನಾಯಕರ ಆಗ್ರಹ. ಪ್ರಜ್ವಲ್ ಬಂಧನ ಯಾಕೆ ತಡವಾಯ್ತು ಎಂದು ಇದೇ ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದರು. ಈಗ ಮುನಿರತ್ನ ಅರೆಸ್ಟ್ ಏಕಾಏಕಿ ನಡೆದಿದೆ ಎನ್ನುತ್ತಿದ್ದಾರೆ.

ಹೀಗೆ ಸುಮ್ಮನೆ ಇಲ್ಲ ಸಲದ ಆರೋಪ ಮಾಡಿ ಬಂಧನದಿಂದ ತಪ್ಪಿಕೊಳ್ಳಲು ಸಾಧ್ಯವಿಲ್ಲ. ಒಂದು ಸಮುದಾಯವನ್ನು ತುಚ್ಛವಾಗಿ ನಿಂದನೆ ಮಾಡಿ, ನಾನೇನು ಮಾಡಿಯೇ ಇಲ್ಲ ಎಂದರೆ ನಂಬುವವರು ಯಾರು ಎಂದು ಲಾಡ್ ಪ್ರಶ್ನೆ ಮಾಡಿದ್ದಾರೆ.


Share It

You cannot copy content of this page