ಬೆಂಗಳೂರು: ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಶೋ ಗೆ ಭಾರತದಲ್ಲಿನ ಪ್ರಾಣಿಗಳ ರಕ್ಷಣಾ ಸಂಘ ‘ಪೇಟಾ’ ನೊಟೀಸ್ ನೀಡಿದೆ.
ಸಲ್ಮಾನ್ ಖಾನ್ ನೇತೃತ್ವದಲ್ಲಿ ನಡೆಯುತ್ತಿರುವ ಹಿಂದಿ ಬಿಗ್ ಬಾಸ್ ಶೋ 18 ನೇ ಆವೃತ್ತಿಯಲ್ಲಿ18 ಸ್ಪರ್ಧಿಗಳ ಜತೆಗೆ ಮತ್ತೊಂದು ಸ್ಪರ್ಧಿಯನ್ನು ಇರಿಸುವ ಮೂಲಕ ಕಾರ್ಯಕ್ರಮದ ಆಯೋಜಕರು ಟ್ವಿಸ್ಟ್ ನೀಡಿದ್ದರು. ಆ ಟ್ವಿಸ್ಟ್ ಏನಂದ್ರೆ, 19 ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದು, ಗದರಾಜ್ ಹೆಸರಿನ ಕತ್ತೆ.
ಅಕ್ಟೋಬರ್ 6 ರಿಂದ ಆರಂಭವಾಗಿರುವ ಶೋ ನಲ್ಲಿ ಟಿವಿ ನಟ ನಟಿಯರು, ರಾಜಕಾರಣಿಗಳು, ಸಾಮಾಜಿಕ ತಾಲತಾಣದ ಪ್ರಭಾವಗಳು ಸ್ವರ್ಧಿಗಳಾಗಿ ಭಾಗವಹಿಸಿದ್ದಾರೆ. ಈ ನಡುವೆ ಕತ್ತೆಯೊಂದನ್ನು ಸ್ಪರ್ಧೆಯಲ್ಲಿ ತರಲು ಬಿಗ್ ಬಾಸ್ ಪ್ರಯತ್ನ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೇಟಾ ನೊಟೀಸ್ ನೀಡಿದೆ.
ಭಾರತದ ಪೇಟಾ ಪರ ವಕೀಲರಾದ ಶೌರ್ಯ ಅಗರ್ವಾಲ್, ಕಾರ್ಯಕ್ರಮದ ನಿರೂಪಕರಾದ ಸಲ್ಮಾನ್ ಖಾನ್ ಮತ್ತು ಕಾರ್ಯಕ್ರಮದ ನಿರ್ಮಾಪಕರಿಗೆ ನೊಟೀಸ್ ನೀಡಿದ್ದು, ಮನರಂಜನಾ ಕಾರ್ಯಕ್ರಮಗಳಲ್ಲಿ ಪ್ರಾಣಿಗಳ ಬಳಕೆಯನ್ನು ಪ್ರಶ್ನೆ ಮಾಡಿದ್ದಾರೆ.
ಕತ್ತಿಯನ್ನು ಬಿಗ್ ಬಾಸ್ ವೇದಿಕೆಗೆ ಕರೆತಂದ ತೀರ್ಮಾನವನ್ನು ವೀಕ್ಷಕರಲ್ಲಿಯೂ ಕೆಲವರು ವಿರೋಧಿಸಿದ್ದಾರೆ. ಪ್ರಾಣಿಗಳು ನಗುವಿನ ಸರಕುಗಳಲ್ಲ ಎಂದು ಪೇಟಾ ಉಲ್ಲೇಖಿಸಿದೆ. ಇದೀಗ ಕಾರ್ಯಕ್ರಮದ ಆಯೋಜಕರು ಏನು ನಿರ್ಧಾರ ತೆಗೆದುಕೊಳ್ತಾರೆ ಕಾದು ನೋಡಬೇಕಾಗಿದೆ.