ಬೆಂಗಳೂರು: CA ನಿವೇಶನ ವಾಪಸ್ ಕೊಟ್ಟರೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ಲೋಕಾಯುಕ್ತದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಿವೇಶನ ವಾಪಸ್ ನೀಡಲು ತೀರ್ಮಾನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದೂರುದಾರ ಎನ್.ಆರ್. ರಮೇಶ್, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ “ಸಿದ್ಧಾರ್ಥ ವಿಹಾರ ಟ್ರಸ್ಟ್” ಹೆಸರಿಗೆ “ಶೈಕ್ಷಣಿಕ ಉದ್ದೇಶ” ಎಂಬ ಹೆಸರಿನಲ್ಲಿ “BDA” ಮತ್ತು “KIADB” ಸಂಸ್ಥೆಗಳಿಂದ ಬೆಂಗಳೂರಿನ 2 ಬೃಹತ್ CA ನಿವೇಶನ ಮಂಜೂರು ಮಾಡಲಾಗಿತ್ತು. ಈ ಸಂಬಂಧ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸಲಾಗಿತ್ತು.
ಆದರೆ, ಈಗ ಸೈಟ್ ವಾಪಸ್ ನೀಡುವ ಮೂಲಕ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಖರ್ಗೆ ಕುಟುಂಬ ಪ್ರಯತ್ನ ಮಾಡುತ್ತಿದೆ. 2 ಎಕರೆ ವಿಸ್ತೀರ್ಣದ 150 ಕೋಟಿಗೂ ಹೆಚ್ಚು ಮೌಲ್ಯದ CA ನಿವೇಶನ ಹಂಚಿಕೆಯಾಗಿದ್ದ ವಿಷಯ ಮರೆಮಾಚಿ “KIADB” ಮೂಲಕ 110 ಕೋಟಿಗೂ ಹೆಚ್ಚು ಮೌಲ್ಯದ 5 ಎಕರೆ ವಿಸ್ತೀರ್ಣದ CA ನಿವೇಶನ ಮಂಜೂರು ಮಾಡಿಸಿಕೊಂಡಿರುವುದು ಕಾನೂನು ಬಾಹಿರ, ವಾಪಸ್ ಕೊಟ್ಟ ಕಾರಣಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಸಂಬಂಧ ಕಾನೂನು ಹೋರಾಟ ನಡೆಸಲು ಮತ್ತು ಪ್ರಕರಣ ದಾಖಲಿಸಿಕೊಳ್ಳಲು “Prosecution Permission” ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಮೂರ್ನಾಲ್ಕು ದಿನದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುತ್ತಿದೆ. ರಾಜ್ಯಪಾಲರನ್ನು ಮತ್ತೇ ಭೇಟಿಯಾಗಿ, ಸಂಪೂರ್ಣ ವಿವರ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.