ಆರೋಗ್ಯ ಉಪಯುಕ್ತ ಸುದ್ದಿ

ಮುಂದೊಂದು ದಿನ ಭೂಮಿಯ ಮೇಲೆ ಗಂಡು ಸಂತಾನವೇ ಇರೋದಿಲ್ವ? ಹೌದೆನ್ನುತ್ತದೆ ಅಧ್ಯಯನ

Share It

ಗಂಡು ಮಕ್ಕಳು ಆದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮಲ್ಲಿ ಗಂಡು ಸಾಂತನವನ್ನು ಪಡೆಯಲು ಹತ್ತಾರು ದೇವರುಗಳ ಮೊರೆ ಹೋಗುತ್ತಾರೆ. ಆದ್ರೆ ಇತ್ತೀಚೆಗೆ ಗಂಡು ಮಕ್ಕಳ ಜನನದ ಸಂಖ್ಯೆ ಕುಸಿತವನ್ನು ಕಂಡಿದ್ದು ಇದು ಹೀಗೆ ಮುಂದುವರೆದರೆ ಪ್ರಪಂಚದಲ್ಲಿ ಗಂಡು ಸಂತಾನವೇ ಇಲ್ಲದಾಗಿ ಪ್ರಪಂಚದ ತುಂಬ ಬರೀ ಹೆಣ್ಣು ಮಕ್ಕಳೇ ಇರುತ್ತಾರೆ ಎಂಬ ಕಳವಳವನ್ನು ವಿಜ್ಞಾನಿಗಳು ವ್ಯಕ್ತ ಪಡಿಸುತ್ತಿದ್ದಾರೆ. ಅಷ್ಟಕ್ಕೂ ಆಗಿರೋದರು ಏನು ಎಂಬುದನ್ನ ಈ ಸ್ಟೋರಿಯಲ್ಲಿ ನೋಡೋಣ ಬನ್ನಿ.

ಮೊದ ಮೊದಲು ಹೆಣ್ಣು ಮಕ್ಕಳು ಆದ್ರೆ ದೋಷ ಮಾಡುತ್ತಿದ್ದವರು ಇಂದು ಮನೆಗೊಂದು ಹೆಣ್ಣು ಮಗು ಬೇಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ಅಷ್ಟಕ್ಕೂ ಗಂಡು ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆಯಾಗಲು ಪ್ರಮುಖ ಕಾರಣ ವೈ ಕ್ರೋಮೋಸೋಮ್ ಗಳ ನಾಶ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ವಿಜ್ಞಾನದ ಪ್ರಕಾರ ಒಂದು ಮಗು ಜನ್ಮ ಪಡೆಯಬೇಕಾದರೆ ವೈ ಮತ್ತು ಎಕ್ಸ್ ಕ್ರೋಮೋಸೋಮ್ ಗಳು ಪ್ರಮುಖ ಪತ್ರವನ್ನು ವಹಿಸುತ್ತವೆ. ಗಂಡಿನಲ್ಲಿ ಎಕ್ಸ್ ಮತ್ತು ವೈ ಕೋಮೋಸೋಮ್ ಗಳು ಇದ್ದರೆ ಹೆಣ್ಣಿನಲ್ಲಿ ಎಕ್ಸ್ ಕ್ರೋಮೋಸೋಮ್ ಗಳು ಇರುತ್ತವೆ. ತಾಯಿಯಿಂದ ಎಕ್ಸ್ ಕ್ರೋಮೋಸೋಮ್ ಮತ್ತು ತಂದೆಯಿಂದ ಎಕ್ಸ್ ಕ್ರೋಮೋಸೋಮ್ ಸೇರಿದಾಗ ಹುಟ್ಟುವ ಮಗು ಹೆಣ್ಣು ಮಗುವಾಗುತ್ತದೆ. ಅದೇ ರೀತಿ ಹೆಣ್ಣಿನ ಎಕ್ಸ್ ಕ್ರೋಮೋಸೋಮ್ ಗೆ ಗಂಡಿನ ವೈ ಕ್ರೋಮೋಸೋಮ್ ಸೇರಿದಾಗ ಹುಟ್ಟುವ ಮಗು ಗಂಡಾಗುತ್ತದೆ.

ಕಳೆದ 164 ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಸುಮಾರು 900 ವಿವಿಧ ಕ್ರೋಮೋಸೋಮ್ ಗಳು ಇದ್ದವು. ಆ ಪೈಕಿ ಈಗ ಕೇವಲ 55 ಬಗೆಯ ಕ್ರೋಮೋಸೋಮ್ ಗಳು ಉಳಿದುಕೊಂಡಿವೆ. ಇವುಗಳು ಸಹ ಇನ್ನು 11 ಮಿಲಿಯನ್ ವರ್ಷಗಳಲ್ಲಿ ಕಣ್ಮರೆಯಾಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಮನುಷ್ಯನ ಹುಟ್ಟಿನ ಬಗ್ಗೆ ಅನೇಕ ಸಂಶೋಧನೆಗಳು ನಡೆದ ನಂತರ ಮಂಗನಿಂದ ಮಾನವ ಎಂಬ ವಿಕಸನ ವಾದವನ್ನು ಸಂಶೋಧಕರು ಮುಂದಿಟ್ಟರು. ಒಟ್ಟಾರೆ ವೈ ಕ್ರೋಮೋಸೋಮ್ ಗಳು ನಾಶವಾದರೂ ಸಹ ಅವುಗಳಿಗೆ ಬದಲಾಗಿ ಇತರ ಕ್ರೋಮೋಸೋಮ್ ಗಳು ಹುಟ್ಟುತ್ತವೆ ಎಂದು ಹೇಳುತ್ತಿದ್ದಾರೆ.

ಟೆಸ್ಟ್ ಟ್ಯೂಬ್ ಬೇಬಿ

ಒಂದು ವೇಳೆ ವೈ ಕ್ರೋಮೋಸೋಮ್ ಸಂಪೂರ್ಣವಾಗಿ ನಾಶವಾದರೆ ಟೆಸ್ಟ್ ಟ್ಯೂಬ್ ಗಳ ಮೂಲಕ ಮಕ್ಕಳನ್ನು ಪಡೆಯುವ ಅವಕಾಶವಿದೆ. ನಮ್ಮ ಪುರಾಣ ಗ್ರಂಥಗಳಲ್ಲಿ ಕೃತಕ ಮನುಷ್ಯನ ಪರಿಕಲ್ಪನೆ, ಪುರುಷನ ಸಂಯೋಗವಿಲ್ಲದೆ ಮಗುವನ್ನು ಹುಟ್ಟಿಸುವ ಕ್ರಿಯೆ ಇವೆಲ್ಲವನ್ನು ಉಲ್ಲೇಖ ಮಾಡಲಾಗಿದೆ.

ನಮ್ಮ ಪೂರ್ವಜರು ಈ ಬಗ್ಗೆ ತಿಳಿಸಿದ್ದಾರೆ ಎಂಬ ಮೇಲೆ ಅವರು ಈ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಕೈ ಗೊಂಡಿರುವ ಸಾಧ್ಯತೆ ಇರುತ್ತೆ. ಎಷ್ಟೋ ಸಂಶೋಧನೆಗಳು ಅವರೊಂದಿಗೆ ನಾಶವಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.


Share It

You cannot copy content of this page