ರಾಜಕೀಯ ಸುದ್ದಿ

18 ಹಿರಿಯ IAS ಅಧಿಕಾರಿಗಳ ವಿರುದ್ಧ ED ಯಲ್ಲಿ ದೂರು ದಾಖಲು

Share It


ಬೆಂಗಳೂರು: 2013-14 ರಿಂದ 2023-24 ರ ವರೆಗಿನ 9 ½ ವರ್ಷಗಳ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆಂದು ಬಿಡುಗಡೆಯಾದ 46,300 ಕೋಟಿ ರೂಪಾಯಿಗಳ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿ 18 ಹಿರಿಯ IAS ಅಧಿಕಾರಿಗಳ ವಿರುದ್ಧ ಎನ್. ಆರ್ ರಮೇಶ್ ED ಯಲ್ಲಿ ದೂರು ದಾಖಲಿಸಿದ್ದಾರೆ.

ಬಿಡುಗಡೆಯಾದ ಅನುದಾನದ ಪೈಕಿ ಶೇ. 75% ರಷ್ಟಕ್ಕೂ ಹೆಚ್ಚು ಹಣ ಸಂಪೂರ್ಣವಾಗಿ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿ 4,113 ಪುಟಗಳ ದಾಖಲೆಗಳ ಸಹಿತ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ಉಮಾಶಂಕರ್ ಸೇರಿ 18 IAS ಅಧಿಕಾರಿಗಳು ಹಾಗೂ ಈ ಹಗರಣದಲ್ಲಿ ಭಾಗಿಯಾಗಿರುವ ಪಾಲಿಕೆಯ ಸಂಬಂಧಪಟ್ಟ ಎಲ್ಲಾ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

46,300 ಕೋಟಿ ರೂಪಾಯಿಗಳ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಹಗರಣಕ್ಕೆ ಸಂಬಂಧಿಸಿ, ಎಲ್ಲಾ ಆರೋಪಿಗಳ ವಿರುದ್ಧ BNS – 2023 ರನ್ವಯ ಸಾರ್ವಜನಿಕರ ಹಣ ದುರ್ಬಳಕೆ, ವಂಚನೆ, ಭ್ರಷ್ಟಾಚಾರ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳಲಾಗಿದೆ ಎಂದು ಅವರು ಪತ್ರಿಕಾ ಪ್ರಕರಣೆಯಲ್ಲಿ ತಿಳಿಸಿದ್ದಾರೆ.


Share It

You cannot copy content of this page