ಬೆಂಗಳೂರು: ಬಿಟಿಎಂ ವಿಧಾನಸಭಾ ಕ್ಷೇತ್ರದ ವೃದ್ಧಾಪ್ಯ ಮತ್ತು ವಿಧವಾ ವೇತನದ ಸೇರಿ ವಿವಿಧ ಸಾಮಾಜಿಕ ಪಿಂಚಣಿ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ಸಚಿವ ರಾಮಲಿಂಗಾ ರೆಡ್ಡಿ ಅವರು ವಿತರಣೆ ಮಾಡಿದರು.
ಕೋರಮಂಗಲದ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ, ಅಂಗವಿಕಲ,
ವಿಧವಾ ವೇತನ, ರಾಷ್ಟೀಯ ವೃದ್ಧಾಪ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ
ಅಂಗವಿಕಲರ ಪೋಷನ ವೇತನಗಳ 25 ಅರ್ಹ ಪಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರಗಳನ್ನು ವಿತರಿಣೆ ಮಾಡಿದರು.
ಮಾಜಿ ಮೇಯರ್ ಬಿ. ಎನ್. ಮಂಜುನಾಥ್ ರೆಡ್ಡಿ, ಎಂ. ಚಂದ್ರಪ್ಪ, ಜಿ.ಮಂಜುನಾಥ್, ಮುರುಗೇಶ್ ಮೊದಲಿಯಾರ್, ಜಿ ಎನ್ ಆರ್ ಬಾಬು, ಬೇಗೂರು ಹೊಬಳಿ ಉಪ ತಹಸೀಲ್ದಾರ್ ದೀಪಕ್, ಗೋವರ್ಧನ್ ರೆಡ್ಡಿ, ಆನಂದ್ ಮತ್ತು ಎಂ. ಸಂಪಂಗಿರಾಜು, ಸವಿತಾ ಉಪಸ್ಥಿತರಿದ್ದರು.

