ಬೆಂಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅಂದ್ರಹಳ್ಳಿಯಲ್ಲಿ ನಡೆದಿದೆ.
ಪತಿ ಮೂರು ವರ್ಷದಿಂದ ಬೇರೊಂದು ಮಹಿಳೆ ಜತೆಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಮಾನಸಾ ಎಂಬ 25 ವರ್ಣದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆರು ವರ್ಷಗಳ ಹಿಂದೆ ಆಕೆ ದಿಲೀಪ್ ಎಂಬಾತನನ್ನು ಮದುವೆಯಾಗಿದ್ದರು. ಅವರಿಗೆ ಐದು ವರ್ಷದ ಮಗುವಿದ್ದು, ಇದೀಗ ಆ ಮಗು ಅನಾಥವಾಗಿದೆ. ಆಕೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಪೋಸ್ಟ್ ಮಾರ್ಟ್ಂ ಗಾಗಿ ರವಾನೆ ಮಾಡಲಾಗಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಠಾಣೆ ಬಳಿಯೇ ಮಾನಸಾ ಸಂಬಂಧಿಕರು ದಿಲೀಪ್ ಗೆ ಥಳಿಸಿದ್ದಾರೆ. ಈತನ ಅಕ್ರಮ ಸಂಬಂಧವೇ ಆಕೆಯ ಸಾವಿಗೆ ಕಾರಣ ಎಂದು ದೂರಿದ್ದು, ಆತಮ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
