ಕ್ರೀಡೆ ಸುದ್ದಿ

ಐಪಿಎಲ್:ಕೆಕೆಆರ್ ತಂಡದ ಮೆಂಟರ್ ಆಗಿ  ಡಿ. ಜೆ ಬ್ರಾವೊ ನೇಮಕ

Share It

ಕೊಲ್ಕತ್ತಾ : ಈಗಾಗಲೇ 2025 ರ ಐಪಿಎಲ್ ಗೆ ಎಲ್ಲಾ ಸಿದ್ಧತೆಗಳು ನೆಡೆಯುತ್ತಿದ್ದು ಎಲ್ಲಾ ತಂಡಗಳೂ ಕೂಡ ತಮ್ಮದೇ ಆದಂಥಹ ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ. ಅದೇ ರೀತಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೂಡ ಈಗ ತನ್ನ ತಂಡದ ಮೆಂಟರ್ ಆಗಿ ವೆಸ್ಟ್ ಇಂಡೀಸ್ ನ ಲೆಜೆಂಡರಿ ಆಲ್ ರೌಂಡರ್ ಡಿ.ಜೆ ಬ್ರಾವೊ ಅವರನ್ನು ನೇಮಕ ಮಾಡಿಕೊಂಡಿದೆ.

ಹೌದು ಕಳೆದ ಬಾರಿ ಗೌತಮ್ ಗಂಭೀರ್ ಅವರ ಮುಂದಾಳತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 2024ರ ಆವೃತ್ತಿಯ ಚಾಂಪಿಯನ್ನಾಗಿ ಹೊರಹೊಮ್ಮಿತ್ತು. ಆದರೆ ಕೆಲವು ದಿನಗಳಿಂದಷ್ಟೇ ಗೌತಮ್ ಗಂಭೀರವರು ತನ್ನ ಮೆಂಟರ್ ಸ್ಥಾನ ತೊರೆದಿದ್ದರು. ಆ ಕಾರಣದಿಂದ ಕೊಲ್ಕತ್ತಾ ತಂಡವು ಈಗ ಡಿಜೆ ಬ್ರಾವೊ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡಿಕೊಂಡಿದೆ.

ಬಳಿಕ ಈ ವಿಚಾರವಾಗಿ ಮಾತನಾಡಿದ ಡಿ ಜೆ ಬ್ರಾವೊ ಹಲವಾರು ಲೀಗ್ ಗಳಲ್ಲಿ ನೈಟ್ ರೈಡರ್ಸ್ ಪರವಾಗಿ ಮತ್ತು ವಿರುದ್ಧವಾಗಿ ಆಟವಾಡಿರುವ ನನಗೆ ನೈಟ್ ರೈಡರ್ಸ್ ತಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿದೆ ಮತ್ತು ಅದರ ಬಗ್ಗೆ ನನಗೆ ಸಾಕಷ್ಟು ಗೌರವವಿದೆ.

ಹಾಗೂ ಈ ಸ್ಥಾನದ ಮೂಲಕ ನಾನು ಮುಂದಿನ ಪೀಳಿಗೆ ಆಟಗಾರರಿಗೆ ಮಾರ್ಗದರ್ಶನ ನೀಡಲು ನನಗೆ ಇದೊಂದು ಸೂಕ್ತ ವೇದಿಕೆ ಅನಿಸುತ್ತಿದೆ. ನೈಟ್ ರೈಡರ್ ತಂಡದ ಕುಟುಂಬದಂತಹ ವಾತಾವರಣ ನನಗೆ ಸಾಕಷ್ಟು ಖುಷಿ ತಂದುಕೊಡುತ್ತದೆ ಎಂದರು.


Share It

You cannot copy content of this page