ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು 140 ಪ್ರಯಾಣಿಕರನ್ನು ಸೇಪ್ ಲ್ಯಾಂಡ್ ಮಾಡಿಸುವಲ್ಲಿ ಫೈಲಟ್ ಗಳು ಸಫಲರಾಗಿದ್ದಾರೆ.
ತಿರುಚನಾಪಳ್ಳಿ ಏರ್ ಪೋರ್ಟ್ ನಿಂದ ಶಾರ್ಜಾಗೆ ಹೊರಡುತ್ತಿದ್ದ AXB 613 ಬೋಯಿಂಗ್ 737 ಸಂಖ್ಯೆಯ ವಿಮಾನದಲ್ಲಿ ಹೈಡ್ರಾಲಿಕ್ ಸಮಸ್ಯೆ ಕಾಣಿಸಿಕೊಂಡು, ಆತಂಕ ಸೃಷ್ಟಿಯಾಗಿತ್ತು.
ಸತತ ಮೂರು ಗಂಟೆಗಳ ಆಕಾಶದಲ್ಲಿಯೇ ಗಿರಕಿ ಹೊಡೆದು ನಂತರ ವಿಮಾನವನ್ನು ಪೈಲಟ್ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿಯೇ ಸೇಫ್ ಲ್ಯಾಂಡಿಂಗ್ ಮಾಡಿದ್ದಾರೆ. ಆ ಮೂಲಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.
ಸತತ ಮೂರು ಗಂಟೆ ಕಾರ್ಯಾಚರಣೆ ಮತ್ತು ಸಮಯಪ್ರಜ್ಞೆ ಬಳಸಿ ವಿಮಾನವನ್ನು ಸೇಫ್ ಲ್ಯಾಂಡ್ ಮಾಡಿದ ಪೈಲೆಟ್ ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
updating…