ನಗರ ಶ್ವಾನದಳದ ಚುರುಕುಬುದ್ದಿಯ ಸೂಪರ್ ಕಾಪ್ ‘ಮಿಕಿ’ಸಾವು: ಶ್ರದ್ಧಾಂಜಲಿ
ಬೆಂಗಳೂರು:ಮಾದಕವಸ್ತು ಕಳ್ಳಸಾಗಣೆ ಪತ್ತೆಮಾಡುವ ಕಾರ್ಯದಲ್ಲಿ ಪೊಲೀಸರೊಂದಿಗೆ ಚಾಣಾಕ್ಷತನದಿಂದ ಕೆಲಸ ಮಾಡುತ್ತಿದ್ದ ನಗರ ಸಶಸ್ತ್ರ ಮೀಸಲು ಪಡೆಯ ಶ್ವಾನ ಮಿಕಿ ಮೃತಪಟ್ಟಿದೆ.
ಈ ಕುರಿತು ನಗರ ಸಶಸ್ತ್ರ ಮೀಸಲು ಪಡೆಯ ಕೆ9 ಘಟಕ ಅಧಿಕೃತ ವಾಗಿ ಟ್ವೀಟ್ ಮಾಡಿದ್ದು, ಅಂತ್ಯಸಂಸ್ಕಾರ ನಡೆಸಿದ ಫೋಟೋಗಳನ್ನು ಹಂಚಿಕೊಂಡಿದೆ.
ಅತ್ಯಂತ ಚುರುಕುಬುದ್ದಿಯಿಂದ ಕೂಡಿದ್ದ ಮಿಕಿ ಎಂಬ ಲಾಬರ್ಡಾರ್ ತಳಿಯ ಈ ಶ್ವಾನ ಅತ್ಯಂತ ಕ್ರಿಯಾಶೀಲವಾಗಿ ಪೊಲೀಸರಿಗೆ ಸಹಕಾರ ನೀಡುತ್ತಿತ್ತು. ಇದೀಗ ಅಕಾಲಿಕ ಮರಣವೊಂದಿದ್ದು ಶ್ವಾನದಳಕ್ಕೆ ಬಹುದೊಡ್ಡ ನಷ್ಟ ಎನ್ನಬಹುದು.
ಈ ಕುರಿತು ನಗರ ಪೊಲೀಸರು ಸಂತಾಪ ವ್ಯಕ್ತಪಡಿಸಿದ್ದು, ಸಾವಿಗೆ ಸಾರ್ವಜನಿಕರು ಕೂಡ ಮರುಕವ್ಯಕ್ತಪಡಿಸಿದ್ದಾರೆ. ಟ್ವೀಟ್ ಸಂದೇಶದ ಮೂಲಕ ನೂರಾರು ಜನ ಮಿಕಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.


