ಸುದ್ದಿ

ಕಸ ಹಾಕುವವನು ಡೊಡ್ಡವನಲ್ಲ ಕಸ ತಗೆಯುವವನು ದೊಡ್ಡವನು: ಶಿವಕುಮಾರ ಶ್ರೀಗಳು

Share It

ಪೌರ ಕಾರ್ಮಿಕರ ಕಾರ್ಯ ಶ್ಗಾಘನಿಯ._ ಶೋ ಬ್ರ ಶಿವಕೂಮಾರ ಸ್ವಾಮಿಗಳು.

ಅಣ್ಣಿಗೇರಿ : ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಸೇವೆ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಸೇವೆ ಮಾಡಿದ್ದು ಶ್ಲಾಘನೀಯ. ಪೌರ ಕಾರ್ಮಿಕರಿಗೆ ಸಿಕ್ಕ ಸೇವೆ ಅದು ಬಹಳ ಸ್ಯಾರಸ್ಸಕರ ವಾದದ್ದು.ಇ ಸೇವೆ ಸಿಗಬೇಕಿಂದರೆ ಸುಕ್ರುತ ಸೇವಯ ಪುಣ್ಯ .ಪೌರ ಕಾರ್ಮಿಕ ಹಾಗೂ ನನ್ನದು ಸೇವೆ ವಂದೆ .ನೀವು ಊರನ್ನು ಸ್ವಚ್ಛ ಮಾಡತ್ತಿರೆ.ನಾನು ಮನಸ್ಸನ್ನು ಸ್ವಚ್ಛ ಮಾಡುವೆ. ಕಸ ಎಸಿಯುವವನು ಡೊಡ್ಡವನಲ್ಲಾ.ಕಸ ಸ್ವಚ್ಛ ಮಾಡುವವನು ಡೊಡ್ಡವನು ಎಂದು ದಾಸೋಹ ಮಠದ ಶ್ರೀ ಶ್ರೋ ಬ್ರ ಶಿವಕೂಮಾರ ಮಹಾಸ್ವಾಮಿಗಳು ಅವರ ಕಾರ್ಯವನ್ನು ಸ್ಮರಿಸಿದರು.

ನಗರದ ಆದಿ ಕವಿ ಪಂಪ ಸ್ಮಾರಕದಲ್ಲಿ ಪೌರಾಡಳಿತ ನಿರ್ದೆಶನಾಲಯ ಬೆಂಗಳೂರು. ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ.ಧಾರವಾಡ ಪುರಸಭೆ ಕಾರ್ಯಾಲಯ ಅಣ್ಣಿಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು..

ಮುಖ್ಯಾಧಿಕಾರಿ ಯಾದ ವಾಯ್ ಜಿ ಗದ್ದಿಗೌಡರ ಮಾತನಾಡಿ ರಾಜ್ಯ ಸರ್ಕಾರ 13 ವರ್ಷಗಳ ಹಿಂದೆ ಸರ್ಕಾರ ನಗರ ಹಾಗೂ ಪಟ್ಟಣದಲ್ಲಿ ಅವರ ಕಾರ್ಯ ಶ್ಗಾಘನಿಯ ಎಂದು ಸರ್ಕಾರದಿಂದ ಆದೇಶ ಹೋರಡಿಸಿತು. ರಾಜ್ಯದ ದಲ್ಲಿ ಬಹಳ ವಿಜೃಂಭಣೆಯಿಂದ ಹಬ್ಬದ ವಾತಾವರಣದಿಂದ ಕಾಣುತ್ತದೆ. ಮಾಡುವ ಕೇಲಸದಲ್ಲಿ ನಮಗೆ ಅಭಿಮಾನ ಇದ್ದರೆ ಮಾತ್ರ ಬೇರೆಯವರು ನಮಗೆ ಗೌರವ ಕೋಡುತ್ತಾರೆ.ಕಾಯಕ ಯಾವುದೆ ಆಗಿರಲಿ ಆದರೆ ನಾವು ಅದನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು. ಸಮಯಕ್ಕೆ ನಾವು ಗೌರವ ಕೋಡಬೇಕಲ್ಲವೆ ? ಸರ್ಕಾರದ ಆದೇಶದಂತೆ ಅಣ್ಣಿಗೇರಿ ಪುರಸಭೆ ವತಿಯಿಂದ ಆರೋಗ್ಯ ತಪಾಸಣಿ . ಸಂಕಷ್ಟ ಭತ್ತಿ.ಮನೆ ನಿರ್ಮಾಣ ಹಾಗೂ ಇನ್ನಿತರ ಕಾರ್ಯಗಳನ್ನು ಹಮ್ಮಿಕೋಂಡಿದ್ದೇವೆ. ಭಾಕಿ ಇರುವ ಸಂಕಷ್ಟ ಭತ್ತಿಯನ್ನು ಕೇಲ ದಿನಗಳಲ್ಲಿ ವದಗಿಸಲಾಗುವದು ಎಂದರು.ನಗರದಲ್ಲಿ ಪೌರ ಕಾರ್ಮಿಕರು ಕಡೆಮೆ ಇದ್ದರು ನಗರವನ್ನು ಸ್ವಚ್ಛ ವಾಗಿಡಲು ಹಗಲಿರುಳು ಶ್ರಮಿಸುತ್ತಿದ್ದಾರೆ.ಅದಲ್ಲದೆ ಪೌರ ಕಾರ್ಮಿಕರು ದುಷ್ಟ ಚಟಗಳಿಗೆ ದಾಸರಾಗದೆ ತಮ್ಮ ಆರೋಗ್ಯವನ್ನು ಕಾಪಾಡಿ ಕೋಳ್ಳಬೇಕು ಎಂದರು.

ಪಾಲಿಕೆ ಪೌರ ಕಾರ್ಮಿಕರ ಜಿಲ್ಲಾಧ್ಯಕ್ಷ ಶಾನು ಸಾಬ ನಾಶಿ ಪುಡಿ ಮಾತನಾಡಿ, ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಅದೇ ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೌಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದರು.

ಮಾಜಿ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಣಗಾರ ಮಾತನಾಡಿ ಪೌರ ಕಾರ್ಮಿಕರ ನೌಕರರ ಸಂಘ ದ ಹೋರಾಟ ದಿಂದ ಇ ಸೌಲಭ್ಯಗಳು ದೋರಿತೆದೆ.ಪೌರ ಕಾರ್ಮಿಕರಿಂದ ಊರಿನ ಬೆಳವಣಿಗೆ ಆಗುತ್ತಿದೆ.ಪೌರ ಕಾರ್ಮಿಕರನ್ನು ಸರ್ಕಾರದ ವತಿಯಿಂದ ಹೋರ ದೇಶಕ್ಕೆ ಪ್ರವಾಸಕ್ಕೆ ಕರೆದುಕೋಂಡು ಹೋಗಲಾಗಿದೆ ಎಂದರು .ಹೋರಾಟದ ಹಾದಿಯಿಂದಲಿ ಪೌರ ಕಾರ್ಮಿಕರಿಗೆ ಸೌಲಭ್ಯ ಪಡೆದುಕೋಳ್ಳುವುದಲಕ್ಕೆ ಸಂಘಟನೆ ಕಾರಣ ಎಂದರು. 1996 ರಲ್ಲಿ ಹಣಕಾಸು ಸಚೀವರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಂದು ಕೈಗೋಂಡ ನಿರ್ಣಯ ಇಂದು ಖಜಾನೆ ಇಲಾಖೆಯಿಂದ ಪೇಮಿಂಟ ಆಗುತ್ತದೆ ಎಂದರು.

ನಂತರ ಪೌರ ಕಾರ್ಮಿಕರ ದಿನಾಚರಣಿ ಅಂಗವಾಗಿ ಅಧ್ಯಕ್ಷರಾದ ಮೇಹಬೂಬಿ ನವಲಗುಂದ ಮಾತನಾಡಿ ಇಂದಿನ ದಿನಮಾನದಲ್ಲಿ ತಮ್ಮ ಆರೋಗ್ಯದ ಗಮನ ವಹಿಸಿ ಅದಲ್ಲದೆ ತಮ್ಮ ಮಕ್ಕಳಿಗೆ ವಳ್ಳಿಯ ಶಿಕ್ಷಣ ನೀಡಿ ಎಂದರು.ಅದಲ್ಲದೆ ಸದಸ್ಯರಾ ನಾಗರಾಜ ದಳವಾಯಿ.ಗಂಗಾ ರಮೇಶ ಕರೆಟ್ಟನವರ.ಸಭೆ ಉದ್ದೇಶಿಸಿ ಮಾತನಾಡಿದರು.

ನಂತರ ವೇದಿಕೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾ ಕೂಟದಲ್ಲಿ ಜಯ ಶೀಲರಾದ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಣ್ಣಿಗೇರಿ ದಾಸೋಹ ಮಠದ ಶಿವಕೂಮಾರ ಮಾಹಾಸ್ವಾಮಿಗಳು. ಮುಖ್ಯಾಧಿಕಾರಿಗಳಾದ ವಾಯ್ ಜಿ ಗದ್ದಿಗೌಡರ. ಜಿಲ್ಲಾ ನಗರಾಭಿವೃದ್ಧಿ ಅಧಿಕಾರಿಯಾದ ಆಜೀಜ ದೇಸಾಯಿ. ಪೌರ ಕಾರ್ಮಿಕರ ಅಧ್ಯಕ್ಷರಾದ ಜಿಲ್ಲಾ ಅಧ್ಯಕ್ಷರಾದ ಶಾನು ನಾಶಿಪುಡಿ ಪುರಸಭೆ ಅಧ್ಯಕ್ಷರರಾದ ಮೇಹಬೂಬಿ ನವಲಗುಂದ.ರೇಹಮನ್ ಸಾಬ ಹೋರಗಿನ ಮನೆ.ಗಂಗಾ ರಮೇಶ ಕರೆಟ್ಟನವರ.ರಜೀಯಾ ಬೇಗಂ ರೋಕ್ಕದಕಟ್ಟೆ.ಶಿವಾನಂದ ಬೆಳಹಾರ ಹಾಗೂ ನಾಮ ನಿರ್ದೇಶಿತ ಸದಸ್ಯರಾದ ಮಾರುತಿ ಕಾಳೆ.ವಿರನಾರಾಯಣ ಬೆಂತೂರ.ಹಸನಸಾಬ ಗಡ್ಡದ ಪೌರಕಾರ್ಮಿಕರು ಹಾಗೂ ಇನ್ನಿತರರು ಇದ್ದರು.

ವರದಿ: ಮಹಾಂತೇಶ ಹಕ್ಕರಕಿ
ಅಣ್ಣಿಗೇರಿ .


Share It

You cannot copy content of this page