ವಿದೇಶದಲ್ಲಿ ಕಾರು ಅಪಘಾತ : ಗೋಕಾಕ ಮೂಲದ ನಾಲ್ವರು ಕನ್ನಡಿಗರ ಸಾವು

Share It

ಬೆಳಗಾವಿ: ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ವಾಹನ ಅಪಘಾತದಲ್ಲಿ ಗೋಕಾಕ ಮೂಲದ ನಾಲ್ವರು ಸಾವಿಗೀಡಾದ ಘಟನೆ ಓಮನ್ ನಲ್ಲಿ ನಡೆದಿದೆ.

ಗೋಕಾಕ ಮೂಲದ ವಿಜಯ ಮಾಯಪ್ಪ ತಹಶೀಲ್ದಾ‌ರ್ (52), ಪವನಕುಮಾರ ಮಾಯಪ್ಪ ತಹಶೀಲ್ದಾರ್ ( 22) ಪೂಜಾ ಆದಿಶೇಷ ಉಪ್ಪಾರ(21) ಆದಿಶೇಷ ಬಸವರಾಜ ಉಪ್ಪಾರ (32) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಗೋಕಾಕ ಮೂಲದವರಾಗಿದ್ದು, ಓಮನ್ ನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದರು ಎನ್ನಲಾಗಿದೆ.

ರಾತ್ರಿ 10 ಗಂಟೆಗೆ ಓಮನ್‌ ನಿಂದ ಕತಾರ್ ಗೆ ಸಂಚರಿಸುವಾಗ ಇವರ ಎಲೆಕ್ಟ್ರಿಕಲ್ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎಲೆಕ್ಟ್ರಿಕಲ್ ಕಾರು ಚೆಲ್ಲಾಪಿಲ್ಲಿಯಾಗಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು,ನಾಲ್ವರು ಸಾವಿಗೀಡಾಗಿದ್ದಾರೆ.


Share It

You May Have Missed

You cannot copy content of this page