ಅಪರಾಧ ಸುದ್ದಿ

ರಾಜಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಏಳು ಸಾವು 15 ಮಂದಿಗೆ ಗಂಭೀರ ಗಾಯ

Share It


ಸಿರೋಹಿ: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದ ಭಾರಿ ರಸ್ತೆ ಅಪಘಾತದಲ್ಲಿ ಟ್ರಕ್ ಮತ್ತು ಟ್ಯಾಕ್ಸಿ ಮುಖಾಮುಖಿ ಡಿಕ್ಕಿಯಾಗಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದಾರೆ.

ಘಟನೆಯ ನಂತರ ಟ್ಯಾಕ್ಸಿ ನಜ್ಜುಗುಜ್ಜಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಜನರು ವಾಹನದಲ್ಲಿಯೇ ಸಿಲುಕಿಕೊಂಡರು. ಸ್ಥಳಕ್ಕಾಗಮಿಸಿದ ಜನರು ಹರಸಾಹಸ ಪಟ್ಟು ವಾಹನದಲ್ಲಿ ಸಿಲುಕಿದ್ದವರನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಗಾಯಾಳುಗಳ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

15ಕ್ಕೂ ಹೆಚ್ಚು ಮಂದಿಗೆ ಗಾಯ: ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರೆ, 15 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಸಿಒ ಭವರಲಾಲ್ ಚೌಧರಿ ತಿಳಿಸಿದ್ದಾರೆ. ಗಾಯಗೊಂಡವರು ಮತ್ತು ಮೃತಪಟ್ಟವರು ಯಾರು ಅನ್ನೋದು ತಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಭುದಯಾಳ್ ಧನಿಯಾ ಮತ್ತು ಪಿಂಡ್ವಾರಾ ಪೊಲೀಸ್ ಠಾಣಾಧಿಕಾರಿ ಹಮೀರ್ ಸಿಂಗ್ ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ಬಂದಿದ್ದು ತನಿಖೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪರದಾಟ: ಅಪಘಾತದ ನಂತರ ಸ್ಥಳದಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿದ್ದು, ಪಿಂಡ್ವಾರಾ ಪೊಲೀಸರು ತೆರವುಗೊಳಿಸುತ್ತಿದ್ದಾರೆ. ಅಪಘಾತವು ತುಂಬಾ ಭೀಕರವಾಗಿದ್ದು, ಗಾಯಾಳುಗಳು ಟ್ಯಾಕ್ಸಿಯಲ್ಲಿ ಬಹಳ ಸಮಯ ಸಿಲುಕಿಕೊಂಡಿದ್ದರು ಮತ್ತು ಸ್ಥಳದಲ್ಲಿದ್ದ ಜನರು ಬಹಳ ಕಷ್ಟಪಟ್ಟು ಹೊರತೆಗೆದರು. ಇಷ್ಟೊಂದು ಸಂಖ್ಯೆಯಲ್ಲಿ ಗಾಯಾಳುಗಳು ಪಿಂಡ್ವಾರಾ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದಾಗ ಅಸ್ತವ್ಯಸ್ತವಾಗಿತ್ತು. ಹಲವು ಸಾಮಾಜಿಕ ಕಾರ್ಯಕರ್ತರು ಕೂಡ ಆಸ್ಪತ್ರೆಗೆ ಆಗಮಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ನೆರವಾದರು


Share It

You cannot copy content of this page