ಬೆಂಗಳೂರು: ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್ (ಕೆಎಎಎಸ್) ಕೊಡ ಮಾಡುವ ಪ್ರಸಕ್ತ ಸಾಲಿನ ಗೌರವ ಫೆಲೋಶಿಪ್ಗೆ ಡಿಆರ್ಡಿಓ ನಿವೃತ್ತ ನಿರ್ದೇಶಕ ಡಾ.ವಿ.ಕೆ.ಆತ್ರೆ, ಪಿಇಎಸ್ ವಿವಿ ಕುಲಾಧಿಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಮತ್ತು ಉದ್ಯಮಿ, ಸಮಾಜ ಸೇವಕ ರುದ್ರೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಸೆ.11ರಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರು ವಿವಿಯ ಡಾ.ವೆಂಕಟಗಿರಿಗೌಡ ಸಮಾಂಭಗಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಮೂವರು ಗಣ್ಯರಿಗೆ ಗೌರವ ಫೆಲೋಶಿಪ್ ನೀಡಿ ಗೌರವಿಸಲಾಗುವುದು.
ಬೆಂ.ವಿವಿ ಕುಲಪತಿ ಪ್ರೊ. ಎಂ.ಎಸ್. ಜಯಕರ್, ವಿಜ್ಞಾನ ವಿಭಾಗದ ಡೀನ್ ಡಾ. ಅಶೋಕ್ ಅಂಜಗಿ ಮತ್ತಿತರರು ಉಪಸ್ಥಿತರಿರುವರು ಎಂದು ಕೆಎಎಎಸ್ ಅಧ್ಯಕ್ಷ ವಿಶ್ರಾಂತ ಕುಲಪತಿ ಡಾ.ಕೆ.ಸಿದ್ದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

