ಬೆಂಗಳೂರು:ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳಲಿದ್ದು, ಚಳಿ, ಗಾಳಿ ಜತೆಗೆ ಮಳೆಯಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ಶಿವಮೊಗ್ಗ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಇಲ್ಲಿ ಮಳೆ ಹೆಚ್ಚಾಗಲಿದೆ.
ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮತ್ತೊಂದೆಡೆ ಧಾರವಾಡ, ಬೀದರ್, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶನಿವಾರ ಇಲ್ಲೆಲ್ಲಾ ಮಳೆಯಾಗಿದೆ: ಕದ್ರಾ, ಗೋಕರ್ಣ, ಅಂಕೋಲಾ, ಜೋಯಿಡಾ, ಯಲ್ಲಾಪುರ, ಕುಮಟಾ, ಹಳಿಯಾಳ, ನಿಪ್ಪಾಣಿ, ಕಾರ್ಕಳ, ಉಡುಪಿ, ಭಾಲ್ಕಿ, ಬೆಳಗಾವಿ, ಚಿಕ್ಕೋಡಿ, ಕೊಟ್ಟಿಗೆಹಾರ, ಆಗುಂಬೆ, ಶಿರಾಲಿ, ಸಿದ್ದಾಪುರ, ಉಪ್ಪಿನಂಗಡಿ, ಹುಬ್ಬಳ್ಳಿ, ಕಲಘಟಗಿ, ಧಾರವಾಡ, ಅಥಣಿ, ಧಾರವಾಡ, ಬೈಲಹೊಂಗಲ, ವಿರಾಜಪೇಟೆ, ಭಾಗಮಂಡಲ, ಕಮ್ಮರಡಿಯಲ್ಲಿ ಮಳೆಯಾಗಿದೆ.

