40 ವರ್ಷದಿಂದ ಇಲ್ಲದ ಕಪ್ಪುಚುಕ್ಕೆಯನ್ನು ಬಿಜೆಪಿ-ಜೆಡಿಎಸ್ ಈಗ ಹುಡುಕುತ್ತಿವೆ: ಸಿಎಂ ವ್ಯಂಗ್ಯ

Share It

ನಾವು-ನೀವು ಒಟ್ಟಾಗಿ ಷಡ್ಯಂತ್ರ ಸೋಲಿಸೋಣ: ಸಿಎಂ‌ ಕರೆ

ಗೋಕಾಕ್ : ನನ್ನ ವ್ಯಕ್ತಿತ್ವದಲ್ಲಿ 40 ವರ್ಷದಿಂದ ಇಲ್ಲದ ಕಪ್ಪುಚುಕ್ಕೆಯನ್ನು ಬಿಜೆಪಿ-ಜೆಡಿಎಸ್ ಈಗ ಹುಡುಕುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಕಲ್ಲೋಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇಷ್ಟು ವರ್ಷ ಮಾಡದ ತಪ್ಪನ್ನು ಈಗ ಮಾಡ್ತೀನಾ? ನಾನು ಮಾಡದಿರುವ ತಪ್ಪನ್ನು ಷಡ್ಯಂತ್ರದಿಂದ ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡ್ತಿದ್ದಾರೆ. ನಾವು-ನೀವು ಒಟ್ಟಾಗಿ ಈ ಷಡ್ಯಂತ್ರ ಸೋಲಿಸೋಣ. ಎಲ್ಲರೂ ಒಟ್ಟಾಗಿರಿ. 7 ಕೋಟಿ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನನ್ನನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ ಎಂದರು.

ಹಿಂದುಳಿದ ಸಮುದಾಯದಿಂದ ಬಂದು ಎರಡು ಬಾರಿ ಸಿಎಂ ಆದೆ ಅಂತ ಬಿಜೆಪಿ-ಜೆಡಿಎಸ್ ಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ನಮಗಮ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಬಾರದು. ನಮ್ಮ ಕಾಂಗ್ರೆಸ್ ಸರ್ಕಾರ ಇರುವವರೆಗೂ ಬಡವರ, ಮಧ್ಯಮ ವರ್ಗದವರ ಪರವಾದ ಗ್ಯಾರಂಟಿ ಕಾರ್ಯಕ್ರಮಗಳು ಜಾರಿಯಲ್ಲಿದ್ದು ಸದಾ ನಮ್ಮ ನೆರವಿನ ಹಸ್ತ ಬಡವರ ಪರವಾಗಿ ಇರುತ್ತದೆ ಎಂದರು.

ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.


Share It

You May Have Missed

You cannot copy content of this page