ರಾಜಕೀಯ ಸುದ್ದಿ

ಸಿಎಂ ಪ್ರಾಸಿಕ್ಯೂಶನ್ ಅನುಮತಿ ವಾಪಸ್ಸಾತಿಗೆ ಆಗ್ರಹಿಸಿ ಗವರ್ನರ್ ವಿರುದ್ಧ ನಾಳೆ ಕೈ ಪ್ರತಿಭಟನೆ

Share It

ಬೆಂಗಳೂರು: ಶನಿವಾರ ಕಾಂಗ್ರೆಸ್ ನಾಯಕರು, ಶಾಸಕರು, ಸಂಸದರು ಮತ್ತು ಮಂತ್ರಿಗಳು ವಿಧಾನಸೌಧದಿಂದ ರಾಜಭವನನದವರೆಗೆ ಜಾಥಾ ನಡೆಸಿ ಮುಡಾ ಪ್ರಕರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಿದ್ದಾರೆ.

ಈಗಾಗಲೇ ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಗೃಹಸಚಿವ ಡಾ.‌ ಜಿ. ಪರಮೇಶ್ವರ್ ಕರೆಸಿಕೊಂಡು ಚರ್ಚೆ ನಡೆಸಿದೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಮುಡಾ ಹಗರಣದ ಪ್ರಾಸಿಕ್ಯೂಶನ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ, ಆಗ ತಕ್ಷಣವೇ ನೀವೇ ಮುಖ್ಯಮಂತ್ರಿಯಾಗಲು ಸಿದ್ಧರಾಗಿರಿ ಎಂದು ಗೃಹ ಸಚಿವ ಪರಮೇಶ್ವರ್ ಅವರಿಗೆ ಸೂಚಿಸಿದೆ.

ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸ್ವತಃ ನಾನು ಸಿಎಂ ಆಗಲು ಸಾಧ್ಯವಿಲ್ಲ, ದೆಹಲಿ ಮಟ್ಟದಲ್ಲಿ ನಾನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷನಾಗಿ ಕೆಲಸ ಮಾಡಲೇಬೇಕಿದೆ, ಆದ್ದರಿಂದ ನೀವೇ ದಲಿತರ ಪರವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಲು ಸಿದ್ಧವಾಗಿರಿ, ನಿಮಗೆ ಡಿ.ಕೆ.ಶಿವಕುಮಾರ್ ಅಡ್ಡಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಎಐಸಿಸಿ ಹೊರುತ್ತದೆ ಎಂದು ಅಭಯ ನೀಡಿದ್ದಾರಂತೆ‌.

ಆದರೆ ಕಾಂಗ್ರೆಸ್ ಹೈಕಮಾಂಡ್ ಕಡೆಯವರೆಗೂ ಸಿದ್ದರಾಮಯ್ಯ, ಸಿಎಂ ಸ್ಥಾನದಲ್ಲಿರುವಂತೆ ಬಹಿರಂಗವಾಗಿ ಹೇಳಿಕೊಳ್ಳುತ್ತದೆ ಅಷ್ಟೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪರಮೇಶ್ವರ್ ಗೆ ದೆಹಲಿಯಲ್ಲಿ ಭವಿಷ್ಯ ನುಡಿದಿದ್ದಾರೆ.

ಹೀಗಾಗಿ, ನೆಪಮಾತ್ರಕ್ಕೆ ನಾಳೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ರಾಜ್ಯದ ಸಂಸದರು, ವಿಧಾನಪರಿಷತ್ ಸದಸ್ಯರು, ಸಚಿವರು ಸೇರಿ ರಾಜಭವನ ಚಲೋ ಅಭಿಯಾನ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ನವದೆಹಲಿ ಕಾಂಗ್ರೆಸ್ ಹೈಕಮಾಂಡ್ ಮೂಲಗಳು ತಿಳಿಸಿವೆ.


Share It

You cannot copy content of this page