ಪದ್ಮನಾಭ ನಗರದಲ್ಲಿ ಪರಿಸರ ಸ್ನೇಹಿ ಗಣೇಶ ವಿತರಣೆ; ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕ್ರಮ
ಬೆಂಗಳೂರು: ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸುವ ನಿಟ್ಟಿನಲ್ಲಿ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಮಣ್ಣಿನ ಗಣೇಶ ವಿತರಣೆ ಕಾರ್ಯಕ್ರಮವನ್ನು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ಹಮ್ಮಿಕೊಂಡಿದ್ದಾರೆ.
ಸಾರ್ವಜನಿಕರು ಈ ಕೆಳಗೆ ಕೊಟ್ಟಿರುವ ಸ್ಥಳ & ಸಮಯವನ್ನು ನೋಡಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಬೇಕು. ಮಣ್ಣಿನ ಗಣೇಶ ವಿಗ್ರಹವನ್ನು ಪಡೆದು ಪರಿಸರ ಸ್ನೇಹಿ ಹಬ್ಬ ಆಚರಿಸುವ ಈ ಉತ್ತಮ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಯುವ ನಾಯಕ ಪ್ರಮೋದ್ ವಿನಂತಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 5 ರಂದು ಬೆಳಿಗ್ಗೆ 8 ರಿಂದ ಕಾಂಗ್ರೆಸ್ ಜನ ಸಂಪರ್ಕ ಕಚೇರಿ, ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆ ಎದುರು, ಪದ್ಮನಾಭನಗರ ಇಲ್ಲಿ ಮಣ್ಣಿನ ಗಣೇಶ ವಿಗ್ರಹ ವಿತರಣೆ ನಡೆಯಲಿದೆ. ಸೀಮಿತವಾಗಿ ವಿಗ್ರಹ ಹಂಚಿಕೆ ಮಾಡಲಿದ್ದು, ಮೊದಲು ಬಂದವರಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಜತೆಗೆ ಒಂದು ಕುಟುಂಬಕ್ಕೆ ಒಂದೇ ಗಣೇಶ ವಿಗ್ರಹ ನೀಡಲಾಗುವುದು ಎಂದು ಪ್ರಮೋದ್ ಶ್ರೀನಿವಾಸ್ ತಿಳಿಸಿದ್ದಾರೆ.