ಸೊಳ್ಳೆಗಳಿಗೆ ಎಷ್ಟು ಹಲ್ಲುಗಳಿವೆ ಗೊತ್ತಾ? ಒಮ್ಮೆಗೆ ಅವು 18 ಮಿ.ಗ್ರಾಂ ರಕ್ತ ಹೀರುತ್ತವೆ !
ಅಬ್ಬಾ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ತಾರಕಕ್ಕೆ ಏರಿ ಸಾವನ್ನಪ್ಪುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೊಳ್ಳೆಗಳು ಮಲೇರಿಯಾ, ಚಿಕನ್ ಗುನ್ಯಾ, ಡೆಂಗ್ಯೂ ಸೇರಿದಂತೆ ಇತರ ಖಾಯಿಲೆಗಳು ಹರಡುತ್ತವೆ. ಅದ್ರೆ ನೀವು ಎಂದಾದರೂ ಯೋಚಿಸಿದ್ದೀರ?? ಸೊಳ್ಳೆಗೆ ಎಷ್ಟು ಹಲ್ಲುಗಳು ಇರಬಹುದು ಎಂದು. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಸೊಳ್ಳೆಗಳು ಪರಾವಲಂಬಿಗಳು ಅವುಗಳು ಮತ್ತೊಬ್ಬರ ದೇಹದ ರಕ್ತವನ್ನು ಕುಡಿದು ಬದುಕುವುದಿಲ್ಲ. ಇವುಗಳ ಚೂಪಾದ ಕೊಕ್ಕಿನಿಂದ ನಮಗೆ ಅರಿವಿಲ್ಲದಂತೆ ರಕ್ತ ಇರುವ ಚಾಣಾಕ್ಷ ಜೀವಿಗಳಾಗಿವೆ. ಒಂದು ಸೊಳ್ಳೆಯಲ್ಲಿ 47 ಹಲ್ಲುಗಳು ಇರುತ್ತವೆ ಎಂದರೆ ನೀವು ನಂಬಲೇ ಬೇಕು. ನಮಗಿಂತ ಹೆಚ್ಚು ಹಲ್ಲುಗಳನ್ನು ಸೊಳ್ಳೆಗಳೇ ಹೊಂದಿವೆ.
ಅದರಲ್ಲೂ ಗಂಡು ಸೊಳ್ಳೆಗಳು ಎಂದಿಗೂ ಕಚ್ಚುವುದಿಲ್ಲ. ಅವುಗಳು ಶಬ್ದ ಮಾಡುತ್ತ ಹಿಂಸೆ ಕೊಡುತ್ತವೆ. ಹೆಣ್ಣು ಸೊಳ್ಳೆಗಳು ರಕ್ತವನ್ನು ಹೀರುತ್ತವೆ. ನೆನಪಿಡಬೇಕಾದ ಅಂಶವೆಂದರೆ ಸೊಳ್ಳೆಗಳು ಎಂದಿಗೂ ತಾವು ಬದುಕುವುದಕ್ಕೆ ರಕ್ತವನ್ನು ಹೀರುವುದಿಲ್ಲ. ಬದಲಿಗೆ ತಮ್ಮ ಸಂತಾನಾಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತವೆ.
ಐಸ್ಲ್ಯಾಂಡ್ ಎಂಬ ದೇಶದಲ್ಲಿ ಒಂದೇ ಒಂದು ಸೊಳ್ಳೆಗಳು, ಕೀಟಗಳು ಮತ್ತು ಹಾವುಗಳು ಇಲ್ಲ. ಈ ದೇಶದಲ್ಲಿ ಸೊಳ್ಳೆಗಳ ಅವಶೇಷಗಳನ್ನು ಮ್ಯೂಸಿಯಂ ನಲ್ಲಿ ಇಟ್ಟು ಸಂಗ್ರಹಿಸಲಾಗಿದೆ.
ಒಮ್ಮೆ ಒಂದು ಸೊಳ್ಳೆ ನಮ್ಮ ರಕ್ತವನ್ನು ಹೀರಲು ಪ್ರಾರಂಭಿಸಿದರೆ ತನ್ನ ದೇಹದ ಮೂರು ಪಟ್ಟು ರಕ್ತವನ್ನು ಬಯಸುತ್ತದೆ. ಆದರೆ ಸಾಮಾನ್ಯವಾಗಿ ಒಂದು ಸೊಳ್ಳೆ 6 ಮಿ. ಗ್ರಾಂ ಇರುತ್ತದೆ. ಸೊಳ್ಳೆಗಳು ಮನಸ್ಸು ಮಾಡಿದರೆ ರಕ್ತವನ್ನು ಬಯಸದೆ ಬದುಕಬಹುದು. ಸಂತಾನೋತ್ಪತ್ತಿ ಅಂತ ಬಂದಾಗ ರಕ್ತ ಬೇಕೇ ಬೇಕು. ಆದ್ದರಿಂದ ಹೆಣ್ಣು ಸೊಳ್ಳೆಗಳು ಮಾತ್ರ ರಕ್ತವನ್ನು ಹೀರುತ್ತವೆ.


