ನಮ್ಮ ಭಾರತವು ಭವ್ಯ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಪುರಾತನ ಕಾಲದಿಂದಲೂ ಭಾರತವು ಜಗತ್ತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬರುತ್ತಿದೆ. ಆದರೆ ನಮ್ಮ ಇತಿಹಾಸದಲ್ಲಿ ನಮಗಿಂತ ಪಾಶ್ಚಾತ್ಯರಿಗೆ ಹೆಚ್ಚಿನ ಮನ್ನಣೆ ದೊರೆತದ್ದು ವಿಪರ್ಯಾಸವೇ ಸರಿ. ನಾವು ಶಾಲೆಯಲ್ಲಿ ಓದುವಾಗ ಆರ್ಕಿಮಿಡೀಸ್ ಪೈಥಾಗರಸ್ ಎಂಬ ಹೆಸರನ್ನು ಕೇಳಿರುತ್ತೇವೆ. ಇವರಿಗಿಂತ ಮೊದಲು ಗಣಿತಕ್ಕೆ ಕೊಡುಗೆ ನೀಡಿದ ನಮ್ಮ ಭಾರತೀಯರ ಬಗ್ಗೆ ತಿಳಿಯೋಣ ಬನ್ನಿ.
ಗಣಿತ ಶಾಸ್ತ್ರಜ್ಞ ಬ್ರಹ್ಮಗುಪ್ತ
ಇವನು ಭಾರತದ ರಾಜಸ್ತಾನದ ಮೌಂಟ್ ಅಬು ಗಿರಿಧಾಮ ಸಮೀಪದಲ್ಲಿ ಜನಿಸಿದರು. ಇವರು ತಮ್ಮ 30 ವಯಸ್ಸಿನಲ್ಲಿ ಗಣಿತದ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿದ್ದ. ಬ್ರಹ್ಮ ಗುಪ್ತ 15 ಅಧ್ಯಯನ ಗ್ರಂಥಗಳನ್ನು ಬರೆದನು. ಜೊತೆಗೆ ಅಂಕ ಗಣಿತದ ಹಲವಾರು ನಿಯಮಗಳನ್ನು ಈತನು ಉಲ್ಲೇಖ ಮಾಡಿದ್ದಾನೆ. ಇವರು ನೀಡಿದ ನಿಯಮಗಳು ಅನಂತದ ವರೆಗೆ ಇರುವ ಸಂಖ್ಯೆಗಳನ್ನು 10 ವಿಭಿನ್ನ ಸಂಖ್ಯೆಗಳೊಂದಿಗೆ ಪತ್ತೆ ಹಚ್ಚಲು ಸಹಕಾರಿಯಾದವು. ಇಂದು ಇದೆ ಮಾದರಿಯನ್ನು ಇಟ್ಟುಕೊಂಡು ವಿಶ್ವದ ಎಲ್ಲ ಕಡೆ ತರಗತಿಯಲ್ಲಿ ಕಲಿಸಲಾಗುತ್ತಿದೆ.
ಗುರುತ್ವಾಕರ್ಷಣೆಯ ಬಗ್ಗೆ ಮೊದಲ ವ್ಯಾಖ್ಯಾನ
ಬ್ರಹ್ಮ ಗುಪ್ತರು ಧನಾತ್ಮಕ ಮತ್ತು ಋಣಾತ್ಮಕ ಅಂಕಿಗಳನ್ನು ನಿರ್ವಹಣೆ ಮಾಡಲು ಒಂದು ಸೆಟ್ ನಿಯಮಗಳನ್ನು ಅಂಕಗಣಿತದಲ್ಲಿ ಬರೆದಿದ್ದಾರೆ. ಇವರು ಗುರುತ್ವಾಕರ್ಷಣೆ ಯನ್ನು ಆಕರ್ಷಣ ಶಕ್ತಿ ಎಂದು ಉಲ್ಲೇಖಿಸಿದ್ದಾರೆ. ನ್ಯೂಟನ್ ಗಿಂತಲೂ ಮೊದಲೇ ಭಾರತೀಯರು ಗುರುತ್ವ ಶಕ್ತಿಯ ಬಗ್ಗೆ ತಿಳಿದಿದ್ದರು ಎಂದರೆ ನೀವು ನಂಬಲೇ ಬೇಕು.
ಭಾರತೀಯ ತತ್ವಶಾಸ್ತ್ರಜ್ಞ ಆರ್ಯಭಟ (476-550) ಕೂಡ ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ. ಇವರು ದಶಮಾನ ಪದ್ಧತಿ, ಖಗೋಳ ಶಾಸ್ತ್ರ, ಗ್ರಹಗಳ ಚಲನೆ, ಭೂಮಿಯ ಗಾತ್ರವನ್ನು ಸುಲಭವಾಗಿ ಕಂಡು ಹಿಡಿಯುವ ತಂತ್ರವನ್ನು ರೂಪಿಸಿದ್ದರು.
ಇವರ ಕೀರ್ತಿಯೂ ಮೊದಲು ಅರಬ್ ದೇಶಗಳಿಗೆ ಹಬ್ಬಿತು. ಬಳಿಕ ಪಶ್ಚಿಮದ ದೇಶಗಳಿಗೆ ಹಬ್ಬಿತು ಶೂನ್ಯ ದಂತಹ ಪರಿಕಲ್ಪನೆಯನ್ನು ಜಗತ್ತಿಗೆ ಕೊಟ್ಟದ್ದು ಭಾರತೀಯರು. ಬ್ರಿಟನ್ ಮತ್ತು ಗ್ರೀಸ್ ನಲ್ಲಿ ನಮ್ಮಿಂದ ಪಡೆದ ಪ್ರಾಚೀನ ಶಿಕ್ಷಣವನ್ನು ಬೋಧನೆ ಮಾಡುತ್ತಿದ್ದರು. ನಮ್ಮ ಭಾರತವು ಪ್ರಾಚೀನ ಕಾಲದಲ್ಲಿಯೇ ಇತರ ದೇಶಗಳಿಗೆ ಶಿಕ್ಷಣವನ್ನು ಧಾರೆ ಎರೆಯುವ ಕೆಲಸ ಮಾಡುತ್ತಿತ್ತು. ಆಧುನಿಕ ಕಾಲದಲ್ಲಿ ನಾವು ಬೇರೆಯವರಿಂದ ಕಲಿತಿದ್ದೇವೆ ಎಂಬ ತಪ್ಪು ಇತಿಹಾಸವನ್ನು ಓದುತ್ತಿದ್ದೇವೆ.