ಗಣೇಶ ಎಂದಿಗೂ ನಂಬಿದವರನ್ನು ಕೈ ಬಿಡುವುದಿಲ್ಲ. ಅವನು ವಿಘ್ನ ನಿವಾರಕ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವನನ್ನು ಗಜಮುಖ, ಗಜಾನನ ಎಂದು ಕರೆಯುತ್ತಾರೆ. ಆದರೆ ಏಕದಂತ ಎಂದು ಕರೆಯಲು ಕಾರಣ ಏನು ಎಂಬುದು ನಿಮಗೆ ತಿಳಿದಿದೆಯಾ?? ಪುರಾಣಗಳಲ್ಲಿ ಅನೇಕ ಗಣಪನ ಕಥೆಗಳನ್ನು ಕೇಳಿರುತ್ತೇವೆ. ಆಗಿದ್ರೆ ಏಕದಂತ ಎಂದು ಹೆಸರು ಬರಲು ಕಾರಣವೇನು ಎಂಬುದನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.
ಮುಖ್ಯವಾಗಿ ಗಣಪನನ್ನು ಏಕದಂತ ಎಂದು ಕರೆಯಲು ನಮ್ಮ ಪುರಾಣಗಳಲ್ಲಿ ಮೂರು ಪ್ರಮುಖ ಕಥೆಗಳನ್ನು ಕಾಣಬಹುದು. ಮೊದಲನೆಯದಾಗಿ ಪರುಶುರಾಮ ನ ಕಥೆ. ಓಮ್ಮೆ ಶಿವನು ಗಣೇಶನನ್ನು ದ್ವಾರ ಬಾಗಿಲಿನಲ್ಲಿ ನಿಲ್ಲಿಸಿ ತನ್ನ ಕೆಲಸದಲ್ಲಿ ತೊಡಗಿರುತ್ತಾನೆ. ಆಗ ಪರುಶುರಾಮ ಮುನಿಯು ಶಿವನನ್ನು ಭೇಟಿಯಾಗಲು ಬಂದಾಗ ಗಣಪ ಅವನನ್ನು ಒಳಕ್ಕೆ ಬಿಡುವುದಿಲ್ಲ. ಆಗ ಮುನಿಯು ಗಣಪನಿಗೆ ಯುದ್ದ ಮಾಡುವಂತೆ ಹೇಳುತ್ತಾನೆ. ಆ ಯುದ್ಧದಲ್ಲಿ ಪರಶುರಾಮನು ಗಣಪನ ದಂತವನ್ನು ಕೊಡಲಿಯಿಂದ ಕತ್ತರಿಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ.
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮಹಾಭಾರತವನ್ನು ಗಣೇಶನ ಕೈಯಲ್ಲಿ ವಾಲ್ಮೀಕಿ ಮಹರ್ಷಿ ಬರೆಸಿದರು ಎಂಬುದು ಗೊತ್ತಿದೆ. ವಾಲ್ಮೀಕಿ ಮಹರ್ಷಿಗಳು ಮೊದಲೇ ಗಣಪನಿಗೆ ಹೇಳಿರುತ್ತಾರೆ. ನಾನು ಕಥೆಯನ್ನು ಹೇಳುತ್ತಾ ಹೋಗುತ್ತೇನೆ. ನೀನು ಬರೆಯಬೇಕು. ಮಧ್ಯ ಯಾವುದೇ ಕಾರಣಕ್ಕೂ ಕಥೆಯನ್ನು ನಿಲ್ಲಿಸಬಾರದು ಎಂದು ಹೇಳಿರುತ್ತಾರೆ.ಆದರೆ ಕಾರಣಾಂತರಗಳಿಂದ ಗಣೇಶ ತನ್ನ ದಂತವನ್ನೇ ಮುರಿದುಕೊಂಡು ಬರೆಯಲು ಶುರು ಮಾಡುತ್ತಾನೆ. ಇದರಿಂದ ಅವನಿಗೆ ಏಕ ದಂತ ಎಂಬ ಹೆಸರು ಬಂತು ಎಂದು ಮಹಾಭಾರತದ ಕಥೆ ಹೇಳುತ್ತದೆ.
ಓಮ್ಮೆ ಗಣೇಶ ಎಲ್ಲರ ಮನೆಯಲ್ಲಿ ಊಟವನ್ನು ಮಾಡಿಕೊಂಡು ತನ್ನ ಪುಟ್ಟ ವಾಹನ ಇಲಿಯ ಮೇಲೆ ಬರುತ್ತಿರುತ್ತಾರೆ. ಆಗ ಆಯಾ ತಪ್ಪಿ ಗಣಪ ಬಿದ್ದು ಬಿದ್ದುಬಿಡುತ್ತಾನೆ. ಇದನ್ನು ನೋಡಿದ ಚಂದಿರ ನಗಲು ಶುರು ಮಾಡುತ್ತಾನೆ. ಆಗ ಗಣೇಶ ಕೋಪದಿಂದ ತನ್ನ ಒಂದು ದಂತವನ್ನು ಮುರಿದು ಚಂದಿರನ ಕಡೆಗೆ ಎಸೆಯುತ್ತಾನೆ ಎಂದು ಪುರಾಣದ ಕಥೆ ಹೇಳುತ್ತದೆ.
ನಮ್ಮ ಗಣಪನ ಬಗ್ಗೆ ಹತ್ತು ಹಲವು ಪುರಾಣ ಕಥೆಗಳಿವೆ. ಬಾಲ್ಯದಲ್ಲಿ ಗಣಪ ಆಟವಾಡುತ್ತಿರುವಾಗ ಸಹೋದರ ಕಾರ್ತಿಕೇಯ ಕೋಪದಿಂದ ಅವನ ದಂತವನ್ನು ಮುರಿದು ಹಾಕಿದ ಎಂದು ಹೇಳಾಗುತ್ತದೆ.