ರಾಜಕೀಯ ಸುದ್ದಿ

ಪ್ರವಾಹ ನಿರ್ವಹಣೆ ವೈಫಲ್ಯಕ್ಕೆ ಕಾರಣರಾದ 30 ಅಧಿಕಾರಿಗಳಿಗೆ ಮರಣದಂಡನೆ !

Share It

ಒಂದಲ್ಲ ಒಂದು ವಿಷಯಕ್ಕೆ ಉತ್ತರ ಕೊರಿಯಾ ಮುನ್ನೆಲೆಗೆ ಬರುತ್ತಲೆ ಇರುತ್ತದೆ. ಉತ್ತರ ಕೊರಿಯಾದಲ್ಲಿ ಸಂಭವಿಸಿದ ಪ್ರವಾಹದಿಂದ ಸುಮಾರು 4000 ಜನ ಸಾವನ್ನಪ್ಪಿದ್ದಾರೆ ಮತ್ತು 4000 ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಜನರನ್ನು ಸುರಕ್ಷಿತ ಪ್ರದೇಶಗಳಲ್ಲಿ ಟೆಂಟ್ ನಿರ್ಮಿಸಿ ಅಗತ್ಯತೆಗಳನ್ನು ಪೂರೈಸುತ್ತಿದ್ದಾರೆ.ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು ಜನರು ನೀರಿನಲ್ಲಿ ಚಿಕ್ಕ ಬೋಟ್ ಗಳ ಮೂಲಕ ತಮ್ಮ ಟೆಂಟ್ ಗಳಿಗೆ ಹೋಗುತ್ತಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳೊಂದಿಗೆ ಬೋಟ್ ನಲ್ಲಿ ತೆರಳಿ ಬೆಳೆ ನಾಶವನ್ನು ಜಮೀನುಗಳಲ್ಲಿ ನಿಂತು ಪರಿಶೀಲನೆ ನಡೆಸಿದ ಮತ್ತು ಟೆಂಟ್ ಗೆ ತೆರಳಿ ಅಲ್ಲಿರುವ ಜನರ ಜೊತೆ ಮಾತನಾಡಿದ್ದಾರೆ ಅಲ್ಲದೆ ಟೆಂಟ್ ನಲ್ಲಿ ಇದ್ದಂತಹ ಮಕ್ಕಳನ್ನು ಮಾತನಾಡಿಸಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ.

ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರ ಆರೋಪ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ 30 ಅಧಿಕಾರಿಗಳು ಅದರಲ್ಲಿ ಚಗಾಂಗ್ ಪ್ರಾಂತ್ಯದ ಸಮಿತಿಯ ಕಾರ್ಯದರ್ಶಿ ಕಾಂಗ್ ಬಾಂಗ್ ಹುನ್ ಸಹ ಇದ್ದಾರೆ.

ಇವರನ್ನು ಪ್ರವಾಹ ಪೀಡಿತ ಪ್ರದೇಶದಲ್ಲೇ ಒಂದೇ ಸಮಯದಲ್ಲಿ ಮರಣದಂಡನೆ ವಿಧಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಚೋಸೆನ್ ಟಿವಿ ವರದಿ ಮಾಡಿದೆ.ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೆ ಮೊದಲ ಬಾರಿಗೆ ಮರಣದಂಡನೆ ನೀಡಿತ್ತಿರುವುದಲ್ಲ ತನ್ನ ಅಧಿಕಾರಕ್ಕೆ ಅಡ್ಡ ಬರಬಹುದೆಂದು ತನ್ನ ಸಹೋದರನನ್ನು ಮತ್ತು ತನ್ನ ಗುರುವಿನಂತಿದ್ದ ಸೋದರ ಮಾವನನ್ನು ಅಧಿಕಾರಕ್ಕೆ ಬಂದು 2ವರ್ಷಕ್ಕೆ ಕೊಲ್ಲಿಸಿದ್ದಾನೆ. ಕೋರೊನಾ ನಂತರ ಉತ್ತರ ಕೊರಿಯಾದಲ್ಲಿ ಮರಣದಂಡನೆ 100ಕ್ಕೆ ಏರಿಕೆಯಾಗಿದೆಯಂತೆ.


Share It

You cannot copy content of this page