ಅಪರಾಧ ಸುದ್ದಿ

ಕಾರ್ ಗೆ ಸೈಡ್ ಕೊಡಲಿಲ್ಲವೆಂದು ಯುವಕನ ಹತ್ಯೆ: ಸೊಂಡೆಕೊಪ್ಪದಲ್ಲಿ ಘಟನೆ

Share It

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತೊಂದು ರೋಡ್ ರೇಜ್ ಪ್ರಕರಣಕ್ಕೆ ಸಾಕ್ಷಿಯಾಗಿದ್ದು, ಬೆಂಗಳೂರು ಉತ್ತರ ತಾಲೂಕಿನಲ್ಲಿ ಸೊಂಡೆಕೊಪ್ಪದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ರಾತ್ರಿ ಹತ್ತು ಗಂಟೆ ಸುಮಾರಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು, ಬೈಕ್ ಸವಾರ ರೆಹಮಾನ್ ಉಲ್ಲಾ ಎಂಬ 19 ವರ್ಷದ ಯುವಕನ ಹಿಂಭಾಗಕ್ಕೆ ಬಂದು ಜೋರಾಗಿ ಹಾರನ್ ಮಾಡಿದೆ. ಆದರೆ, ಕೆಲವೊತ್ತು ಕಾಲ ಆತ ಸೈಡ್ ಬಿಡಲು ಆಗಲಿಲ್ಲ. ಇದನ್ನೇ ಕಾರಣವಾಗಿಟ್ಟುಕೊಂಡು ಆತನ ಮೇಲೆ ನಾಲ್ಕು ಜನರ ಗುಂಪು ಬರ್ಬರವಾಗಿ ಹಲ್ಲೆ ನಡೆಸಿದೆ.

ಸೊಂಡೆಕೊಪ್ಪದಲ್ಲಿ ನಡೆದ ಘಟನಾಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Share It

You cannot copy content of this page