ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಭೂಮಿಯ ವೀಕ್ಷಣಾ ಉಪಗ್ರಹ-8 (EOS-8) ವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಿಗ್ಗೆ ಯಶಸ್ವಿಯಾಗಿ ಎಸ್ ಎಸ್ ಎಲ್ ವಿ ಯ 3ನೇ ಅಭಿವೃದ್ಧಿ ವಾಹಕ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಚಿಮ್ಮಿದೆ.
ಶುಕ್ರವಾರ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿರುವ ಇಸ್ರೊ, “ಎಸ್ ಎಸ್ ಎಲ್ ವಿ ಯ 3ನೇ ಅಭಿವೃದ್ಧಿ ವಾಹಕ ಹಾರಾಟ ಯಶಸ್ವಿಯಾಗಿದೆ. SSLV-D3 ನಿಖರವಾಗಿ EOS-08 ನ್ನು ಕಕ್ಷೆಗೆ ಸೇರಿಸಿತು. ಇದು ISRO/DOS ನ SSLV ಅಭಿವೃದ್ಧಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಂತ್ರಜ್ಞಾನ ವರ್ಗಾವಣೆಯೊಂದಿಗೆ, ಭಾರತೀಯ ಉದ್ಯಮ ಮತ್ತು ಎನ್ಎಸ್ಐಎಲ್ ಇಂಡಿಯಾ ಈಗ ಎಸ್ಎಸ್ಎಲ್ ವಿಯನ್ನು ವಾಣಿಜ್ಯ ಕಾರ್ಯಾಚರಣೆಗಳಿಗಾಗಿ ಉತ್ಪಾದಿಸುತ್ತದೆ ಎಂದಿದೆ.
ಗುರುವಾರ ಮಧ್ಯರಾತ್ರಿ 2.47ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದು SSLV-D3/EOS-08 ಮಿಷನ್ 3ನೇ ಮತ್ತು ಅಂತಿಮ ಅಭಿವೃದ್ಧಿ ವಾಹಕವಾಗಿದೆ. ಈ ನೌಕೆ 1 ವರ್ಷದ ಅವಧಿಗೆ ಕಾರ್ಯನಿರ್ವಹಿಸಲಿದೆ.
ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆ, ಅಪ್ಲಿಕೇಶನ್‌ಗಳಿಗಾಗಿ ಹಗಲು ಮತ್ತು ರಾತ್ರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಪತ್ತೆ, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಮತ್ತು ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಮೇಲ್ವಿಚಾರಣೆ. GNSS-R ಪೇಲೋಡ್ ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶದ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಮೇಲಿನ ಕ್ರಯೋಸ್ಪಿಯರ್ ಅಧ್ಯಯನಗಳು, ಪ್ರವಾಹ ಪತ್ತೆ ಮತ್ತು ಒಳನಾಡಿನ ಜಲಮೂಲ ಪತ್ತೆ ಮುಂತಾದ ವಿಷಯಗಳ ಕುರಿತು ನೌಕೆ ಅಧ್ಯಯನ ನಡೆಸಲಿದೆ.