ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್ ನ್ಯೂಸ್. ಪಶ್ಚಿಮ ರೈಲು ವಿಭಾಗವು 2024 – 25 ನೆಯ ಸಾಲಿನ ಅಪ್ರೆಂಟಿಸ್ ತರಬೇತುದಾರರ ನೇಮಕಾತಿಗಾಗಿ ಅರ್ಜಿಯನ್ನು ಕರೆದಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಒಟ್ಟು 3624 ಹುದ್ದೆಗಳ ನೇಮಕಾತಿಗೆ ಅವಕಾಶವಿದ್ದು ವಿವರಗಳನ್ನು ಕೆಳಗಿನಂತೆ ನೋಡೋಣ .
ಹುದ್ದೆಗಳ ವಿವರಗಳು
ಮಷಿನಿಸ್ಟ್
ಫಿಟ್ಟರ್
ಕಾರ್ಪೆಂಟರ್
ವೆಲ್ಡರ್
ಪೇಂಟರ್
PASSA
ಮೆಕ್ಯಾನಿಕ್ ಮೋಟಾರು ವೆಹಿಕಲ್
ಇಲೆಕ್ಟ್ರಾನಿಕ್ ಮೆಕ್ಯಾನಿಕ್
ಡೀಸೆಲ್ ಮೆಕ್ಯಾನಿಕ್
ವೈಯರ್‌ಮನ್
ಇಲೆಕ್ಟ್ರೀಷಿಯನ್
ರೆಫ್ರಿಜೆರೇಟರ್ ( ಎಸಿ-ಮೆಕ್ಯಾನಿಕ್)
ಪ್ಲಂಬರ್
ಟರ್ನರ್
ಪೈಫ್ ಫಿಟ್ಟರ್
ಡ್ರಾಫ್ಟ್‌ಮನ್ (ಸಿವಿಲ್)
ಸ್ಟೆನೋಗ್ರಾಫರ್
ಅರ್ಜಿ ಪ್ರಾರಂಭವಾಗುವ ದಿನಾಂಕ 23- 09-2024
ಅರ್ಜಿಯನ್ನು ಆನ್ಲೈನ್ ಅಲ್ಲಿ ಸಲ್ಲಿಸಲು ಕೊನೆಯ ದಿನಾಂಕ 22 -10-2024 , ಸಂಜೆ 5 ಗಂಟೆಯ ವರೆಗೆ ಅವಕಾಶವಿದೆ.
SC ST PWD ಅಭ್ಯರ್ಥಿಗಳಿಗೆ ಅರ್ಜಿಯ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ಇರುತ್ತದೆ.
ವಯೋಮಿತಿ
ಅರ್ಜಿಯನ್ನು ಸಲ್ಲಿಕೆ ಮಾಡಲು ಕನಿಷ್ಠ 15 ವರ್ಷಗಳು ಗರಿಷ್ಠ 24 ವರ್ಷ ಮೀರಬಾರದು. ಯಾವುದೇ ವಯಸ್ಸಿನ ಮೀಸಲಾತಿ ಅನ್ವಯವಾಗುವುದಿಲ್ಲ.
ವಿದ್ಯಾರ್ಹತೆ
ಐಟಿಐಯನ್ನು ಪೂರ್ಣ ಗೊಳಿಸಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಟ್ರೇಡ್ ಪ್ರಮಾಣ ಪತ್ರಗಳನ್ನು ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಯ್ಕೆಯ ವಿಧಾನ
ಮೊದಲು ಅಭ್ಯರ್ಥಿಯ ಮೆಟ್ರಿಕ್ಯೂಲೇಷನ್‌ನ ಶೇಕಡ.50 ಹಾಗೂ ಐಟಿಐ ನ ಶೇಕಡ 50 ಅಂಕಗಳ ಆಧಾರದ ಮೇಲೆ ಲಿಸ್ಟ್ ತಯಾರಿಸಲಾಗುತ್ತದೆ. ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಪಾಸ್ ಆದವರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ವಾರ್ಷಿಕ 8,000-9,000 ವೇತನ ನೀಡಲಾಗುತ್ತದೆ.
ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
