ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಹಾದಿಗೆ ಅಡ್ಡ ಬಂದು ಕಾನೂನು ಉಲ್ಲಂಘನೆ ಮಾಡಿದ ಜನಾರ್ದನ ರೆಡ್ಡಿ ಅವರ ರೇಂಜ್ ರೋವರ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ರಾಯಚೂರಿನಿಂದ ಆಗಮಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರ ಜೀರೋ ಟ್ರಾಫಿಕ್ ದಾರಿಗೆ ಅಡ್ಡಲಾಗಿ ಜನಾರ್ದನ ರೆಡ್ಡಿ ತಮ್ಮ ಕಾರು ನುಗ್ಗಿಸಿದ್ದರು. ಇದು ಸಿಎಂ ಶಿಷ್ಟಾಚಾರ ಉಲ್ಲಂಘನೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಕಾರು ಚಾಲಕನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದರು. ಗಂಗಾವತಿ ಶಾಸಕರು ಆದ ಜನಾರ್ದನ ರೆಡ್ಡಿ ಸರಕಾರದ ವಿರುದ್ಧ ಕಿಡಿಕಾರಿದ್ದರು.
ಸರಕಾರ ಜನಾರ್ದನ ರೆಡ್ಡಿ ಅವರ ನಡೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರ ವಿರುದ್ಧ ಕಠಿಣವಾಗಿ ನಡೆದುಕೊಳ್ಳಲು ತೀರ್ಮಾನಿಸಿದೆ. ಹೀಗಾಗಿ, ಜನಾರ್ದನ ರೆಡ್ಡಿ ಅವರ ರೇಂಜ್ ರೋವರ್ ಕಾರನ್ನು ವಶಕ್ಕೆ ಪಡೆದಿದ್ದಾರೆ.