ಉಪಯುಕ್ತ ಸುದ್ದಿ

ಮೈಸೂರಿನಲ್ಲಿ ಉದ್ಯೋಗಾವಕಾಶ: ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನ

Share It

ಮೈಸೂರಿನಲ್ಲಿರುವ ಹಲವು ಗ್ರಾಮ ಪಂಚಾಯಿತಿಗಳಲ್ಲಿರುವ ಗ್ರಂಥಾಲಯಗಳ ಮೇಲ್ವಿಚಾರಕರ ನೇಮಕಾತಿಗೆ ಆದೇಶವನ್ನು ಹೊರಡಿಸಿದೆ. ಮೈಸೂರಿನ ಅಕ್ಕ ಪಕ್ಕದವರ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ವಿಧಾನ ,ಅರ್ಹತೆಗಳು, ಮುಂತಾದ ವಿವರಗಳನ್ನು ಈ ಕೆಳಗಿನಂತೆ ನೋಡೋಣ ಬನ್ನಿ.

ಒಟ್ಟು 19 ಹುದ್ದೆಗಳು ಇದ್ದು , ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಇದೇ ಅಕ್ಟೋಬರ್ 30.

ಹುದ್ದೆಗಳನ್ನು ವರ್ಗವಾರು ವಿಭಜನೆ ಮಾಡಿದ್ದು ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗೆ ಆಯ್ಕೆಯಾದವರಿಗೆ ಸರ್ಕಾರದ ನಿಯಮದ ಪ್ರಕಾರ ಗೌರವ ಸಂಭಾವನೆ ನೀಡಲಾಗುತ್ತದೆ.

ಅರ್ಹತೆಗಳು :

ಪಿಯುಸಿ ಪೂರ್ಣಗೊಳಿಸಿರಬೇಕು.
ಲೈಬ್ರೆರಿಯ ಸೈನ್ಸ್ ಪ್ರಮಾಣ ಪತ್ರ ಹಾಗೂ ಕಂಪ್ಯೂಟರ್ ಕೋರ್ಸ್ ನಲ್ಲಿ ಪಾಸ್ ಆಗಿರಬೇಕು.
ಇದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಇದ್ದರೂ ಪರಿಗಣಿಸುವುದಿಲ್ಲ.

ವಯೋಮಿತಿ :

ಕನಿಷ್ಠ 18 ವರ್ಷ. ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ,2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.SC,ST ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಮೀಸಲಾತಿ ಬಯಸುವವರು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸುವಾಗಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಆಯ್ಕೆಯ ವಿಧಾನ :

ಗಳಿಸಿದ ಅಂಕಗಳ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ , ಬಳಿಕ ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮುಖ್ಯ ದಿನಾಂಕ:

ಅರ್ಜಿ ಶುರುವಾದ ದಿನಾಂಕ 07-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-10-2024

ಅರ್ಜಿ ಶುಲ್ಕ :

ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ. ಹಿಂದುಳಿದ ಅಭ್ಯರ್ಥಿಗೆ 300 ರೂ, SC,ST, ಪ್ರವರ್ಗ 1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗೆ 200ರೂ ಹಾಗೂ ವಿಕಲ ಚೇತನರಿಗೆ 100 ರೂ.

ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://mysore.nic.in/en/zilla-panchayat/


Share It

You cannot copy content of this page