ಉಪಯುಕ್ತ ಸುದ್ದಿ

ಪ್ರಸಾರ ಭಾರತಿಯಲ್ಲಿ ಉದ್ಯೋಗ: ಇಂದೇ ಅರ್ಜಿ ಸಲ್ಲಿಸಿ

Share It

ಭಾರತೀಯ ಪ್ರಸಾರ ಸಂಸ್ಥೆಯಾದ ಪ್ರಸಾರ ಭಾರತಿ ಹಾಗೂ ಆಕಾಶವಾಣಿಯಲ್ಲಿ ಪ್ರತಿ ಸಂಪಾದಕ ಹುದ್ದೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಯನ್ನು ಗುತ್ತಿಗೆಯ ಆಧಾರದಲ್ಲಿ ಆಯ್ಕೆ ಮಾಡಲಿದ್ದು, ಅರ್ಹತೆಗಳು, ವೇತನ ಹಾಗೂ ಇತರೆ ಮಾಹಿತಿಯನ್ನು ಕೆಳಗಿನಂತೆ ತಿಳಿಯೋಣ ಬನ್ನಿ.

ಅಭ್ಯರ್ಥಿಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಗುವುದು. ಉದ್ಯೋಗ ಸ್ಥಳ ಬೆಂಗಳೂರು.

ವಿದ್ಯಾರ್ಹತೆ :

  1. ಯಾವುದೇ ವಿಶ್ವವಿದ್ಯಾನಿಲಯದಿಂದ ಅಥವಾ ಶಿಕ್ಷಣ ಸಂಸ್ಥೆಯಿಂದ ಪದವಿಯನ್ನು ಪಡೆದಿರಬೇಕು.
  2. ಕನಿಷ್ಠ 5 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಇರಬೇಕು.
  3. ಅಥವಾ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿಯಲ್ಲಿ , ಡಿಪ್ಲೊಮಾ ಮಾಡಿದ್ದಾರೆ ಸಾಕು. ಜೊತೆಗೆ 3 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಇರಬೇಕು.
  4. ಕನ್ನಡ , ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹಿಡಿತವನ್ನು ಹೊಂದಿರಬೇಕು.

ಕೌಶಲ್ಯಗಳು :

  1. ಸಾಮಾಜಿಕ ಜಾಲತಾಣಗಳು ಮತ್ತು ಸರ್ಚ್ ಇಂಜಿನ್ ಗಳ ನಿರ್ವಹಣೆಯ ಬಗ್ಗೆ ಜ್ಞಾನವಿರಬೇಕು.
    2.ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟೀಯ ಸುದ್ದಿಗಳ ವಿದ್ಯಮಾನಗಳ ಬಗ್ಗೆ ಅರಿವಿರಬೇಕು.
  2. ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಪರಿಣಿತಿ ಇರಬೇಕು.

ಕರ್ತವ್ಯಗಳು :

  1. ಪ್ರಾದೇಶಿಕ ಕೇಂದ್ರಗಳೊಂದಿಗೆ ಸಂಪರ್ಕ ಮತ್ತು ಸಂಪಾದಕೀಯ ಮಂಡಳಿಯ ಸಮನ್ವಯತೆ ಕಾಪಾಡುವುದು.
  2. ಪ್ರಾದೇಶಿಕ ಕೇಂದ್ರಗಳಲ್ಲಿ ಸುದ್ದಿಗಳ ಪ್ರಸಾರ.
  3. ಮಾಹಿತಿ ಸಂಗ್ರಹಣೆ ಮತ್ತು ಪ್ರಸಾರ.
  4. ಅಗತ್ಯತೆಗೆ ತಕ್ಕಂತೆ ವಿಡಿಯೋ, ಗ್ರಾಫಿಕ್ಸ್ ,ಫೋಟೋ ಗಳನ್ನು ಬಳಸುವುದು.
  5. ಗುಣಮಟ್ಟದ ಪರಿಶೀಲನೆ ಮತ್ತು ಅನುವಾದ.

ವೇತನ : 35, 000
ಕನಿಷ್ಠ 18 ವರ್ಷ ಹಾಗೂ 35 ವರ್ಷ ವಯೋ ಮಿತಿ ಇರಬೇಕು. ಯಾವುದೇ ಸಡಿಲಿಕೆ ಇರುವುದಿಲ್ಲ.

ಆಯ್ಕೆ ವಿಧಾನ :

ಮೊದಲು ಅಭ್ಯರ್ಥಿಗಳ ಶಾಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗುವುದು. ಬಳಿಕ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿಯನ್ನು ಸಲ್ಲಿಸುವಾಗ ಎಲ್ಲ ಕೇಳಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಶಾಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಇ ಮೇಲ್ ಮೂಲಕ ಸಂಪರ್ಕ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ :

ಅರ್ಜಿಯನ್ನು ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಆದೇಶವನ್ನು ಹೊರಡಿಸಿದ 15 ದಿನಗಳೊಳಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
http://applications.prasarbharati.org/


Share It

You cannot copy content of this page