ಕ್ರೀಡೆ ಸುದ್ದಿ

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ನಿಶಾದ್‌ಗೆ ಬೆಳ್ಳಿ ಪದಕ

Share It

ಬೆಂಗಳೂರು: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಪುರುಷರ ಹೈ ಜಂಪ್ ಟಿ೪೭ ಸ್ಪರ್ಧೆಯಲ್ಲಿ ಭಾರತದ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. 24 ವರ್ಷದ ಅವರು ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

ಭಾರತಕ್ಕೆ ೭ನೇ ಪದಕ:
ನಿಶಾದ್ ಅವರ ಬೆಳ್ಳಿ ಪದಕದೊಂದಿಗೆ ಭಾರತವು ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ 7 ನೇ ಪದಕವನ್ನು ಗೆದ್ದುಕೊಂಡAತಾಗಿದೆ. ಇದಕ್ಕೂ ಮುನ್ನ ಭಾರತೀಯ ಕ್ರೀಡಾಳುಗಳು 1 ಚಿನ್ನ, 1 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು. ಇದೀಗ ನಿಶಾದ್ ಅವರ ಬೆಳ್ಳಿ ಪದಕದೊಂದಿಗೆ ಪದಕಗಳ ಸಂಖ್ಯೆ ಏಳಕ್ಕೇರಿದೆ. ಭಾರತ ಪದಕ ಪಟ್ಟಿಯ 27 ನೇ ಸ್ಥಾನ ಪಡೆದುಕೊಂಡಿದೆ


Share It

You cannot copy content of this page