ಪರಿಸರ ಸಂರಕ್ಷಣೆ ಜತೆಯಲ್ಲಿ ಮಳೆ ನೀರು ಸಂರಕ್ಷಣೆಗೆ ಆಧ್ಯತೆ ನೀಡಿ ಉಮಾರಬ್ಬ ಅಭಿಮತ
ಹೊಸಕೋಟೆ: ಪರಿಸರ ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಆನೇಕ ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿವೆ. ಮಕ್ಕಳಿಗೆ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಒಂದೊಂದು ಸಸಿಯನ್ನು ನೆಟ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಯ ಜನಾಂಗಕ್ಕೆ ಪರಿಸರ ಮತ್ತು ಅಮೂಲ್ಯವಾದ ನೀರನ್ನು ಉಳಿಸುವಂತ ಕಾರವಾಗಲಿದೆ.ಪರಿಸರ ನಮ್ಮಗೆ ಸಾಕಷ್ಟು ಕೊಡುಗೆ ನೀಡುತ್ತಿದೆ.ನಾವು ಪರಿಸರದಲ್ಲಿ ಮರ ಗಿಡಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ರೂಪಿಸುವ ಕಾರ್ಯವನ್ನು ಮಾಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮಾರಬ್ ಹೇಳಿದರು.
ಮಾತನಾಡಿ ಮಕ್ಕಳಿಗೆ ವಾತಾವರಣದ ನೀರು, ಪರಿಸರ, ಜಾಗೃತಿ ಮೂಡಿಸುವಂತೆ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಿಹಿಂಗು ಗುಂಡಿ ಮಳೆ ನೀರು ಕೊಯ್ದನಂತ ಯೋಜನೆಗಳನ್ನು ಮನೆಗಳಿಗೆ ಅಳವಡಿಸಿ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದೆ ನಮ್ಮ ಮನೆಗಳ ಹಾಸುಪಾಸಿನಲ್ಲಿ ಹಿಂಗುವಂತೆ ಮಾಡಿದರೆ ಅಂತರ್ಜಲ ಹೆಚ್ಚಲಿದೆ. ಪರಿಸರ ಸಂರಕ್ಷಣೆ ಬತೆಯಲ್ಲಿ ಮಳೆ ನೀರು ಸಂರಕ್ಷಣೆಗೆ ಆಧ್ಯತೆ ನೀಡಿ ಮಕ್ಕಳಿಗೆ ಇದರ ಮಹತ್ವ ಸಾರಬೇಕುಹೊಸಕೋಟೆ ತಾಲೂಕಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ 4 ಕೋಟಿಯಷ್ಟು ಅನುದಾನಗಳನ್ನು ಬೇರೆ ಬೇರೆ ಯೋಜನೆಗಳಲ್ಲಿ ನೀಡಲಾಗಿದೆ. ಕೆರೆ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಸಾಮಾಜಿಕ ಕಾರ್ಯಕ್ರಮಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರಸುತ್ತ ದಿನಗಳಲ್ಲಿ ನೀರುಮತ್ತು ಪರಿಸರ ಸಂರಕ್ಷಣೆ ನಮ್ಮಲ್ಲರ ಗುರಿಯಾಗಿರಬೇಕು ಎಂದರು.
ವಲಯ ಅರಣ್ಯಾಧಿಕಾರಿ ವೆಂಕಟೇಶ್ ಮಾತನಾಡಿ, ಕೆರೆಗಳಲ್ಲಿ ಗಿಡಗಳನ್ನು ನೆಡುವುದರಿಂದ ಪರಿಸರದಲ್ಲಿ ಮರ ಗಿಡ ಹೆಚ್ಚಳದ ಜತೆಗೆ ಕೆರೆಗಳನ್ನು ಒತ್ತುವರಿಯಿಂದ ತಡೆಯಬಹುದು. ಅರಣ್ಯ ಇಲಾಖೆಯಿಂದ ಕೃಷಿ ಪೋತ್ಸಾ ಹ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಂಡು ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ರೈತರಿಗೂ ಸಸಿಗಳನ್ನು ವಿತರಣೆ ಮಾಡಲಾಯಿತು. ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಸಹಾಯಕ ಸಬ್ ಇನ್ ಪೆಕ್ಟರ್ ಕರಾರು ಹುಸೇನ್, ಗಿಡ್ಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷ ನವಿತಾ ಸುರೇಶ್, ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಪ್ಪ, ತಾಲೂಕು ಯೋಜನಾಧಿಕಾರಿ ಹರೀಶ್, ಧರ್ಮಗಳ ಸೇವಾ ಬಳಗ ಸದಸ್ಯ ಆನಂದ್, ಸಿದ್ದೇನಹಳ್ಳಿ ಗ್ರಾಮದ ಯುವ ಮುಖಂಡ ಪ್ರಕಾಶ್, ಬೆಟ್ಟಹಳ್ಳಿ ಆಂಜಿನಪ್ಪ, ವಲಯ ಮೇಲಚಾರಕ ಚಂದನ್, ಕೃಷಿ ಮೇಲ್ವಚಾರಕ ಚೇತನ್, ವಿಪತ್ತು ನಿರ್ವಹಣಾ ಸದಸ್ಯರು, ವಲಯ ಸೇವಾ ಪ್ರತಿನಿಧಿಗಳು, ರೈತ ಸಂಘದ ಸದಸ್ಯರು, ಗ್ರಾಮದ ಮುಖಂಡರು ಹಾಜರಿದ್ದರು.
ಕೋಟ್ ೧
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಪರಿಸರ ಬೆಳೆಸುವ ಹಾಗೂ ಅಂತರ್ಜಲ ವೃದ್ಧಿಗೆ ಪೂರಕವಾಗಿರುವ ಕೆರೆಗಳನ್ನು ಉಳಿಸಿ ಅಭಿವೃದ್ಧಿಪಡಿಸುವ ಮಹತ್ವಕಾಂಕ್ಷೆ ಕಾಠ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುವುದರಿಂದ ಪ್ರಾಣಿ, ಪಕ್ಷಿಗಳಿಗೂ ಅಲ್ಲದೆ ಜನರಿಗೂ ತುಂಬಾ ಅನುಕೂಲವಾಗಲಿದೆ.ಶಾಲಾ ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸುವ ಮೂಲಕ ಚಿಕ್ಕ ಮಕ್ಕಳ ಹಂತದಿಂದಲೇ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೀಡಬೇಕು
| ಎಂ.ಆರ್ ಉಮೇಶ್, ಜಿಲ್ಲಾಧ್ಯಕ್ಷ
ವರದಿ: ನಾರಾಯಣಸ್ವಾಮಿ ಸಿ.ಎಸ್