ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದ ಆರ್‌ಟಿಐ ಕಾರ್ಯಕರ್ತನಿಗೆ ಜೀವ ಬೆದರಿಕೆ
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಹೀಗಾಗಿ, ಗಂಗರಾಜು ಅವರು ಓರ್ವ ಗನ್ ಮ್ಯಾನ್ ನೀಡುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆದರೆ, ಗಂಗರಾಜು ಅವರಿಗೆ ಗನ್ ಮ್ಯಾನ್ ನೀಡಲು ನಿರಾಕರಿಸಿದ್ದು, ಗಂಗರಾಜು ಮನೆಯ ಬಳಿ ನಿರಂತರವಾಗಿ ಪೊಲೀಸ್ ಬೀಟ್ ನಿಯೋಜಿಸಲಾಗಿದೆ. ಗಂಗರಾಜು ಮನೆಯ ಬಳಿ ಬೀಟ್ ಸಹಿ ಪುಸ್ತಕ ಇಡಲಾಗಿದೆ.
ಅಲ್ಲದೇ, ಜೀವಹಾನಿ ಬಗ್ಗೆ ಮಾಹಿತಿ ಇದ್ದರೆ ಪೊಲೀಸ್ ಠಾಣೆಗೆ ದೂರು ನೀಡಿ. ಒಂದು ವೇಳೆ ನಿಮ್ಮ ಕುಟುಂಬ ಹಾಗೂ ನಿಮಗೆ ಭದ್ರತೆ ಬೇಕಿದ್ದರೇ, ನಿಯಮಾನುಸಾರ ಹಣ ಪಾವತಿಸಿ ಗನ್ ಮ್ಯಾನ್ ಪಡೆಯಿರಿ ಎಂದು ಪೊಲೀಸರು ಗಂಗರಾಜು ಅವರಿಗೆ ಹಿಂಬರಹ ನೀಡಿದ್ದಾರೆ.


