ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ t20 ಪಂದ್ಯವು ಇಂಗ್ಲೆಂಡ್ ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆಯಿತು. ಇಂಗ್ಲೆಂಡ್ ತಂಡ 3 ವಿಕೆಟ್ 6 ಬಾಲ್ ಗಳು ಇರುವಂತೆ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 28 ರನ್ ಗಳ ಗೆಲುವನ್ನು ಸಾಧಿಸಿತ್ತು.
ಇಂಗ್ಲೆಂಡ್ ನಾಯಕ ಫಿಲ್ ಸಾಲ್ಟ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟ್ರಾವಿಸ್ ಹೆಡ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಮೊದಲು ಬ್ಯಾಟಿಂಗ್ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಿದ ನಾಯಕ ಟ್ರಾವಿಸ್ ಹೆಡ್ 31ರನ್ ಮತ್ತು ಮ್ಯಾಟ್ ಶಾರ್ಟ್ 28 ರನ್ ಗಳ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಪತನ ನಂತರ ಕ್ರೀಸ್ ಗೆ ಬಂದ ಫ್ರೆಸರ್ ಮೆಕ್ ಗುರ್ಕ್ ಬಿರುಸಿನ ಆಟವಾಡಿ ಅರ್ಧಶತಕ ಸಿಡಿಸಿದರು. ನಂತರ ಬಂದ ಇಂಗ್ಲೀಷ್ 42 ರನ್ ಗಳಿಸಿದರಿಂದ ಆಸ್ಟ್ರೇಲಿಯಾ ತಂಡವು ಸೀಮಿತ 20 ಓವರ್ ಗಳಲ್ಲಿ 193 ರನ್ ಗಳಿಗೆ 6ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ತಂಡದ ಬೌಲರ್ ಗಳಾದ ಬ್ರೀಡನ್ ಕಾರ್ಸ್ ಮತ್ತು ಲಿವಿಂಗ್ ಸ್ಟೋನ್ 2ವಿಕೆಟ್ ಹಾಗೂ ಆದಿಲ್ ರಶೀದ್ ಮತ್ತು ಸ್ಯಾಮ್ ಕರನ್ ತಲಾ 1ವಿಕೆಟ್ ಪಡೆದರು.
193 ರನ್ ಗಳನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಫಿಲ್ ಸಾಲ್ಟ್ 39 ರನ್ ಗಳ ಆರಂಭ ನೀಡಿದರು ವಿಲ್ ಜಾಕ್ ಮತ್ತೆ ನಿರಾಸೆ ಮೂಡಿಸಿದರು.ಲಿವಿಂಗ್ ಸ್ಟೋನ್ ಸಿಡಿಸಿದ 87 ಮತ್ತು ಜಾಕೋಬ್ ಬೆಥೆಲ್ 44 ರನ್ ಗಳಿಂದ ಇಂಗ್ಲೆಂಡ್ ತಂಡವು ಗೆಲುವಿನ ದಡ ಸೇರಲು ಸಾಧ್ಯವಾಯಿತು. ಆಸ್ಟ್ರೇಲಿಯಾ ಬೌಲರ್ ಗಳಾದ ಮ್ಯಾಟ್ ಶಾರ್ಟ್ 5 ವಿಕೆಟ್ ಮತ್ತು ಸಿಯನ್ ಅಬೋಟ್ 2 ವಿಕೆಟ್ ಪಡೆದರು. ಮೂರನೇ ಪಂದ್ಯದಲ್ಲಿ ಯಾವ ತಂಡ ಗೆಲುವನ್ನು ಕಾಣುತ್ತದೆಯೋ ಆ ತಂಡ ಸರಣಿ ವಶಪಡಿಸಿಕೊಳ್ಳುತ್ತದೆ.