ರಾಜ್ಯದ ಈ ಜಿಲ್ಲೆಗಳಲ್ಲಿ ಅ.8 ರವರೆಗೂ ಮಳೆ

Share It

ಬೆಂಗಳೂರು : ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್​ 8ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ತುಮಕೂರು ಜಿಲ್ಲೆಗಳಲ್ಲೂ ಮಳೆಯಾಗಲಿದೆ.

ನಿನ್ನೆ ಈ ಪ್ರದೇಶಗಳಲ್ಲಿ ಮಳೆ

ಪುತ್ತೂರು, ಹುಕ್ಕೇರಿ, ಸಂಕೇಶ್ವರ, ಹಿಡಕಲ್ ಅಣೆಕಟ್ಟು, ಬಾಳೆಹೊನ್ನೂರು, ತಿಪಟೂರು, ಚಿಕ್ಕೋಡಿ, ಕೊಟ್ಟಿಗೆಹಾರ, ಕಳಸ, ದಾವಣಗೆರೆ, ಉಪ್ಪಿನಂಗಡಿ, ಬೈಲಹೊಂಗಲ, ಬೀದರ್, ಜಯಪುರ, ಎನ್​ಆರ್​ಪುರ, ಮೂಡಿಗೆರೆ, ಕಾರ್ಕಳ, ಮುಂಡಗೋಡು, ಧರ್ಮಸ್ಥಳ, ಕುಂದಗೋಳ, ಲಿಂಗಸುಗೂರು, ಹುಂಚದಕಟ್ಟೆ, ಲಿಂಗನಮಕ್ಕಿಯಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಶುಭ್ರ ಆಕಾಶವಿರುವ ಕಾರಣ ಮಳೆ ಸಾಧ್ಯತೆ ಕಡಿಮೆ.


Share It

You May Have Missed

You cannot copy content of this page