ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ದಲಿತ ಸಚಿವರ ಮಿಡ್ ನೈಟ್ ಮೀಟಿಂಗ್ ರಹಸ್ಯವೇನು?
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮೂಡಾ ಹಗರಣದ ಕುಣಿಕೆ ಬಿಗಿಯಾಗುತ್ತಿದ್ದಂತೆಯೇ ದಲಿತ ಸಮುದಾಯದ ಸಚಿವರು ನಡೆಸಿರುವ ‘ಮಿಡ್ ನೈಟ್’ ಮೀಟಿಂಗ್ ಇದೀಗ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ನಾನ್ ತಪ್ಪು ಮಾಡಿಲ್ಲ, ರಾಜೀನಾಮೆ ಕೊಡಲ್ಲ ಎಂದು ಹೇಳುತ್ತಿದ್ದರೂ, ಪಕ್ಷದಲ್ಲೇ ಅವರ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ದಲಿತ ನಾಯಕರು ನಡೆಸಿದ ತಡರಾತ್ರಿ ಮೀಟಿಂಗ್ ಮಹತ್ವ ಪಡೆದುಕೊಂಡಿದೆ.
ಸಿದ್ದರಾಮಯ್ಯ ಆಪ್ತರಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲುವ ಕುರಿತಾಗಿದ್ದು ಎಂದು ಹೇಳಲಾಗುತ್ತಿದ್ದು, ಸತ್ಯ ಬೇರೆಯೇ ಇದೆ.
ಮಂಗಳವಾರವಷ್ಟೇ ಡಿ.ಕೆ.ಶಿವಕುಮಾರ್ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮನೆಗೆ ಭೇಟಿ ನೀಡಿದ್ದರು. ಇದೀಗ ಸಿದ್ದರಾಮಯ್ಯ ಬೆಂಬಲಿಗ ಸಚಿವರು, ಡಾ. ಪರಮೇಶ್ವರ್ ಜತೆಗೆ ಚರ್ಚೆ ಮಾಡಿದ್ದಾರೆ. ಇದು ಎಲ್ಲೋ ಒಂದು ಕಡೆ ಡಾ. ಜಿ. ಪರಮೇಶ್ವರ್ ಕೇಂದ್ರ ಬಿಂದುವಾಗುತ್ತಿರುವ ಲಕ್ಷಣ ಎನ್ನಲಾಗುತ್ತಿದೆ.
ಸಧ್ಯಕ್ಕೆ ಸಿದ್ದರಾಮಯ್ಯ ಪರ ಎಲ್ಲ ದಲಿತ ನಾಯಕರು ಒಟ್ಟಾಗಿ ನಿಲ್ಲುವುದು ದಲಿತ ಸಚಿವರ ಸಭೆಯ ಮೊದಲ ಆಧ್ಯತೆಯಾಗಿದೆ. ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭ ಒದಗಿ ಬಂದರೆ, ದಲಿತ ಸಮುದಾಯದ ನಾಯಕನೊಬ್ಬನ ಆಯ್ಕೆ ನಿಶ್ಚಿತ ಎನ್ನಲಾಗಿದೆ.
ದಲಿತ ಸಿಎಂ ವಿಚಾರ ಬಂದಾಗ ಮಹಾದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಎಂಬ ಡಿವೈಡ್ ಪಾಲಿಸಿ ಮೂಲಕ ದಲಿತ ನಾಯಕರ ಅಧಿಕಾರದ ಕನಸು ಮುರಿಯುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ, ಇಂತಹ ನಾಟಕೀಯ ಬೆಳವಣಿಗೆಗೆ ಅವಕಾಶ ನೀಡದಂತೆ ನಡೆದುಕೊಳ್ಳಲು ತೀರ್ಮಾನಿಸಲಾಗಿದೆ.
ಯಾವೊಬ್ಬ ದಲಿತ ನಾಯಕನ ಕಡೆಗೆ ಹೈಕಮಾಂಡ್ ಕೈ ತೋರಿದರೂ ವಿರೋಧ ವ್ಯಕ್ತಪಡಿಸದೆ, ಸಮುದಾಯಕ್ಕೆ ಸಿಎಂ ಸ್ಥಾನ ಬರುವಂತೆ ನೋಡಿಕೊಳ್ಳಲು ದಲಿತ ನಾಯಕರು ತೀರ್ಮಾನಿದ್ದಾರೆ. ಈ ನಿಟ್ಟಿನಲ್ಲಿ ಡಾ. ಪರಮೇಶ್ವರ್ ಹೆಸರು ಮುಂಚೂಣಿಯಲ್ಲಿದ್ದು, ಹೀಗಾಗಿ ಅವರ ಸುತ್ತಲೂ ಎಲ್ಲ ನಾಯಕರು ಸುತ್ತಾಟ


