ಅಪರಾಧ ರಾಜಕೀಯ ಸುದ್ದಿ

ಬಿಜೆಪಿ ಅವಧಿಯ ಕೋವಿಡ್‌ ಹಗರಣ: ತನಿಖೆಗೆ SIT ರಚಿಸಲು ತೀರ್ಮಾನ

Share It


ಬೆಂಗಳೂರು:ಬಿಜೆಪಿ ಕಾಲದಲ್ಲಿ ನಡೆದಿದ್ದ ಕೋವಿಡ್ ಹಗರಣದ ಸಂಬಂಧ SIT ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕರೋನಾ ಸಮಯದಲ್ಲಿ ಅಂದಿನ ಸರಕಾರದ ಅಮಾನವೀಯ ನಡೆ, ಭ್ರಷ್ಟಾಚಾರ, ಜನರಿಗೆ ಮೋಸ, ಮಾಹಿತಿ ಕೊಡದಿರುವುದು, ದಾಖಲೆಗಳ ನಾಶ ಮಾಡುವುದು ಸೇರಿ ವಿಧಾನ ಮಂಡಲ ಸಮಿತಿಯಲ್ಲಿ ಅನೇಕ ವಿಷಯಗಳು ಚರ್ಚೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸರಕಾರ ತೀರ್ಮಾನ ನಡೆಸಿದೆ.

ನ್ಯಾಯಮೂರ್ತಿ ಮೈಕೆಲ್ ಡಿ. ಖುನ್ನಾ ನೇತೃತ್ವದ ಸಮಿತಿ ನೀಡಿರುವ ಮಧ್ಯಂತರ ವರದಿಯ ಆಧಾರದಲ್ಲಿ ಪರಿಶೀಲನೆ ನಡೆಸಿದ ಸಚಿವ ಸಂಪುಟದ ಉಪಸಮಿತಿ, ಇಂದು ಸಚಿವ ಸಂಪುಟದ ಮುಂದೆ ವರದಿ ಸಲ್ಲಿಸಿತು. ಸಮಿತಿಯ ಅಧ್ಯಕ್ಷರಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಇದ್ದು, ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್ ಸೇರಿ ಅನೇಕ‌ ಸಚಿವರು ಸಮಿತಿಯಲ್ಲಿದ್ದರು.

ಪಿಪಿಇ ಕಿಟ್ ಗಳಿಗೆ ದೇಶದಲ್ಲಿ 340 ರು. ಇರುವ ಸಂದರ್ಭದಲ್ಲಿ ವಿದೇಶದಿಂದ 2117 ರು. ನೀಡಿ ಲಕ್ಷಾಂತರ ಕಿಟ್ ಗಳನ್ನು ತರಿಸಿಕೊಳ್ಳಲಾಗಿದೆ. ಅವಧಿ ಮುಗಿದ ಔಷಧಿಗಳನ್ನು ಬಳಸಲಾಗಿದೆ. ಕೆಲವು ಉಪಕರಣಗಳು ದಾನಿಗಳಿಂದ ಬಂದಿದ್ದಕ್ಕೂ, ಅದಕ್ಕೆ, ಹಣ ಬಿಡುಗಡೆ ಮಾಡಿರುಗುದು ಬೆಳಕಿಗೆ ಬಂದಿದೆ.

ಖುನ್ನಾ ನೇತೃತ್ವದ ಸಮಿತಿ 50 ಸಾವಿರ ಕಡತಗಳನ್ನು ಪರಿಶೀಲಿಸಿ, ತನ್ನ ಮಧ್ಯಂತರ ವರದಿಯನ್ನು ನೀಡಿದೆ‌. ವರದಿಯಲ್ಲಿ ಸರಕಾರ ಮತ್ತು ಅಧಿಕಾರಿಗಳ ಅಮಾನವೀಯ ನಡೆಯನ್ನು ಗಮನಿಸಬಹುದು. ಸರಕಾರ ನಡೆದುಕೊಂಡಿದ್ದ ರೀತಿಯನ್ನು ವರದಿ ಬಹಿರಂಗಗೊಳಿಸಿದೆ. ಹೀಗಾಗಿ, SIT ರಚನೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಸರಕಾರ ತೀರ್ಮಾನಿಸಿದೆ.


Share It

You cannot copy content of this page