ಬೆಂಗಳೂರು: ಕೇಂದ್ರ ಸಚಿವ ವಿ. ಸೋಮಣ್ಣ ನಿವಾಸದಲ್ಲಿ ಬಿಜೆಪಿ ಅತೃಪ್ತರು ಭಾಗವಹಿಸಿದ್ದು, ಆ ಮೂಲಕ ಹೈಕಮಾಂಡ್ ಸಂದೇಶ ನೀಡಿದೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿ. ಸೋಮಣ್ಣ ಅವರ ಸರಕಾರಿ ನಿವಾಸದ ಪೂಜೆ ನೆಪದಲ್ಲಿ ಯತ್ನಾಳ್ ಬಣ ಸಭೆ ಸೇರಿದೆ. ನೆಮ್ಮೆಯಷ್ಟೇ ಸೋಮಣ್ಣ ನಾನು ಪೂಜೆಗೆ ಯಾರನ್ನೂ ಆಹ್ವಾನ ಮಾಡಿಲ್ಲ ಎಂದಿದ್ದರು. ಈಗ ಪೂಜೆಯಲ್ಲಿ ಯತ್ನಾಳ್ ಬಣದ ಬಹುತೇಕ ನಾಯಕರು ಭಾಗವಹಿಸಿದ್ದರು.
ಯತ್ನಾಳ್, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಮಹೇಶ್ ಕುಮಟಹಳ್ಳಿ, ಹರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಭೆಯ ನಂತರ ಮಾತನಾಡಿದ ಯತ್ನಾಳ್, ಸೋಮಣ್ಣ ಅವರ ಮೂಲಕ ಹೈಕಮಾಂಡ್ ನಮಗೆ ಸಂದೇಶ ಕಳುಹಿಸಿದೆ ಎಂದು ತಿಳಿಸಿದರು.