ಕಾರವಾರ, ಉತ್ತರ ಕನ್ನಡ:
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೈಕ್ ಜಾಥಾ ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಸ್ಪಿ ದೀಪನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ರವಿವಾರ ಬೆಳಿಗ್ಗೆ 10ಕ್ಕೆ ಚಾಲನೆ ನೀಡಿದರು.
ಇದೇ ವೇಳೆ ಸಂವಿಧಾನದ ಪೀಠಿಕೆ, ಪ್ರಸ್ತಾವನೆ ಓದಿ, ಪ್ರತಿಜ್ಞೆ ಮಾಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಹಸಿರು ನಿಶಾನೆ ತೋರಿ ಜಾಥಕ್ಕೆ ಶುಭಕೋರಲಾಯಿತು.
ಬೈಕ್ ಸವಾರರು ಕಾರವಾರ ದಿಂದ ಬೆಂಗಳೂರು ತಲುಪಿ, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರಲ್ಲಿ ಏರ್ಪಡಿಸಿರುವ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.