ಬೆಂಗಳೂರು: ಬಜೆಟ್ ಉತ್ತಮವಾಗಿ ಮೂಡಿ ಬಂದಿದೆ. ಎಲ್ಲ ಇಲಾಖೆಗಳಿಗೂ ಹಿಂದಿನ ಬಾರಿಗಿಂತ ಹೆಚ್ಚಿನ ಅನುದಾನ ನೀಡಲಾಗಿದೆ. ಹೀಗಾಗಿ, ಸದನದಲ್ಲಿ ಎಲ್ಲ ಸಚಿವರು ಮತ್ತು ಶಾಸಕರು ಬಜೆಟ್ ಅನ್ನು ಪರಿಣಾಮಕಾರಿಯಾಗಿ ಸಮರ್ಥನೆ ಮಾಡಿಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದರು.
ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ಕುರಿತು ಶಾಸಕರು ಮತ್ತು ಸಚಿವರಿಗೆ ಸೂಚನೆ ನೀಡಲಾಯಿತು. ಬಜೆಟ್ ಉತ್ತಮವಾಗಿದ್ದು, ಕೇಂದ್ರದಿಂದ ನಿರೀಕ್ಷಿತ ನೆರವು ದೊರೆಯದಿದ್ದರೂ ಹಣಕಾಸು ವ್ಯವಸ್ಥೆ ಉತ್ತಮವಾಗಿದೆ. ಹೀಗಾಗಿ, ಬಜೆಟ್ ಬಗ್ಗೆ ಸಮರ್ಥವಾಗಿ ತಿಳಿಸಬೇಕು. ಸದನದಲ್ಲಿ ಮತ್ತು ಹೊರಗೆ ಸಾರ್ವಜನಿಕರಿಗೆ ಬಜೆಟ್ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು.
ಸಚಿವರುಗಳು ಉಭಯ ಸದನಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರೂ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸದನದಲ್ಲಿ ಮಂತ್ರಿಗಳು, ಶಾಸಕರು ಇಲ್ಲ ಎನ್ನುವಂತಾಗಬಸರದು ಎಂದು ತಿಳಿಸಿದರು.

