ಮುಡಾ ಸೈಟ್ ಹಂಚಿಕೆ ಹಗರಣ: ಇಡಿ ಭಯದಲ್ಲಿ 18 ಅಧಿಕಾರಿಗಳು!
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಬೇತಾಳದಂತೆ ಕಾಡುತ್ತಿರುವ ಮುಡಾ ಕೇಸ್ ಇದೀಗ ಅಧಿಕಾರಿಗಳನ್ನು ಇಡಿ ಆತಂಕದಲ್ಲಿ ಬೀಳುವಂತೆ ಮಾಡಿದೆ.
ಹೌದು, ಮೈಸೂರಿನ ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಇದೀಗ ಮುಡಾದಲ್ಲಿ 2017 ರಲ್ಲಿ ಕಾರ್ಯನಿರ್ವಹಿಸಿದ್ದ 18 ಅಧಿಕಾರಿಗಳಿಗೆ ಆತಂಕ ಶುರುವಾಗಿದೆ.
ಹಿನಕಲ್ ಸರ್ವೆ ನಂಬರ್ 89 ರ ಸೈಟ್ ಹಂಚಿಕೆ ಹಗರಣದಲ್ಲಿ ಇದೀಗ 2017 ರಲ್ಲಿ ಕಾರ್ಯನಿರ್ವಹಿಸಿದ್ದ 18 ಮುಡಾ ಅಧಿಕಾರಿಗಳಿಗೆ ಬಂಧನ ಭೀತಿ ಸೃಷ್ಟಿಯಾಗಿದೆ.
ಏಕೆಂದರೆ ಕಳೆದ ಸೆಪ್ಟೆಂಬರ್ 9 ರಂದು ಹಿನಕಲ್ ಸರ್ವೆ ನಂಬರ್ 89 ರ ಸೈಟ್ ಹಂಚಿಕೆ ಮಾಡಿ ಸುಮಾರು 350 ಕ್ಕೂ ಹೆಚ್ಚಿನ ಪ್ರಭಾವಿಗಳಿಗೆ ಸೈಟ್ ನೀಡಿದ ಬಗ್ಗೆ ಇದೀಗ ಇ.ಡಿ (ಕೇಂದ್ರ ಜಾರಿ ನಿರ್ದೇಶನಾಲಯ) 2 ESCIR ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಇದೀಗ ಈ ಎಲ್ಲಾ 18 ಅಧಿಕಾರಿಗಳಿಗೆ ಇಡಿ ತನಿಖೆ ಎದುರಿಸುವ ಆತಂಕ ತಂದಿದೆ.
ಹಿಂದೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಕಾನೂನು ಬಾಹಿರವಾಗಿ ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನು ನೀಡಿದ್ದಕ್ಕೆ ಪ್ರತಿಯಾಗಿ 14 ಮುಡಾ ಸೈಟ್ ಗಳನ್ನು ಬಳುವಳಿಯಾಗಿ ಕೊಟ್ಟ ಆರೋಪ ಸಹ ಈ 18 ಅಧಿಕಾರಿಗಳನ್ನು ಕಾಡುತ್ತಿದೆ.


