ಸೌತ್ ಆಫ್ರಿಕಾ ಮತ್ತು ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ odi ಸರಣಿಯಲ್ಲಿ ಮೊದಲ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯಿತು. ಟಾಸ್ ಗೆದ್ದ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಬ್ಯಾಟಿಂಗ್ ಮಾಡಲು ಬಂದ ಆಫ್ರಿಕಾ ತಂಡಕ್ಕೆ ಆಫ್ಘಾನಿಸ್ತಾನದ ಪರೂಕಿ 4 ವಿಕೆಟ್ ಮತ್ತು ಅಲ್ಲಾಹ್ ಘಜಾಂಗರ್ 3 ವಿಕೆಟ್ ಬೌಲರ್ ಗಳ ಮಾರಕ ದಾಳಿಗೆ 37 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಸಂಕಷ್ಟದಲ್ಲಿದ್ದ ಆಫ್ರಿಕಾ ತಂಡಕ್ಕೆ ವಿಯಾನ್ ಮೂಲ್ಡರ್ ನ ಅರ್ಧ ಶತಕ ನೆರವೇರಿನಿಂದ 100 ರನ್ ಗಳಿತು. ರಶೀದ್ ಖಾನ್ ಕೊನೆಯಲ್ಲಿ ಬಂದು 2 ವಿಕೆಟ್ ಪಡೆದು ಸೌತ್ ಆಫ್ರಿಕಾ ತಂಡ 33.3 ಓವರ್ ಗಳಲ್ಲಿ 106 ರನ್ ಗಳಿಗೆ ಆಲ್ ಔಟ್ ಆಯಿತು.
ಸುಲಭ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ ತಂಡವು ಆರಂಭಿಕ ಆಘಾತವಾಗಿ ಗುರ್ಬಾಜ್ ವಿಕೆಟ್ ಕಳೆದುಕೊಂಡಿತು, ನಂತರ 60 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಅಜ್ಮಉಲ್ಲ ಒಮರ್ಜೈ 25 ರನ್ ಮತ್ತು ಗುಲ್ಬದೀನ್ ನೈಬ್ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆಫ್ಘಾನಿಸ್ತಾನ ತಂಡವು ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಅಫ್ಘಾನಿಸ್ತಾನ ತಂಡವು 24 ಓವರ್ ಗಳು ಬಾಕಿ ಇರುವಂತೆ ಗೆದ್ದು ಐತಿಹಾಸಿಕ ಸಾಧನೆಯನ್ನು ಮಾಡಿದೆ. ಸೌತ್ ಆಫ್ರಿಕಾದ ಕಡಿಮೆ ರನ್ ಕಲೆ ಹಾಕಿರುವುದರಲ್ಲಿ ಈ ಮ್ಯಾಚ್ ನ 106 ರನ್ ಗಳಾದ 8ನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ 1993ರಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಪಂದ್ಯದಲ್ಲಿ 69 ರನ್ ಗಳಿಗೆ ಆಲ್ ಔಟ್ ಆಗಿತ್ತು.