ರಾಜಕೀಯ ಸುದ್ದಿ

ವಾಲ್ಮೀಕಿ ಸಮುದಾಯದ ಯುವಕರು ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಿ: ಆರ್.ಕೆ.ಪಾಟೀಲ್ ಸಲಹೆ

Share It


ಆಳಂದ: ತಾಲೂಕಿನ ಆಡಳಿತ ಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ ಉದ್ಘಾಟಿಸಿದರು.

ವಾಲ್ಮೀಕಿ ಜಯಂತಿ ಪ್ರಖ್ಯಾತ ಋಷಿ ಮತ್ತು ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನಕ್ಕೆ ಮೀಸಲಾದ ದಿನವಾಗಿದೆ. ಅವರು ಭಗವಾನ್ ಶ್ರೀರಾಮನ ಪರಮ ಭಕ್ತರಾಗಿದ್ದರು ಎನ್ನುವ ನಂಬಿಕೆಯಿದೆ. ಹಿಂದೂ ಪುರಾಣಗಳ ಪ್ರಕಾರ, ವಾಲ್ಮೀಕಿ ಋಷಿ ಸೀತಾ ದೇವಿಯು ಅಯೋಧ್ಯೆ ರಾಜ್ಯವನ್ನು ತೊರೆದು ತನ್ನ ಪತಿಯೊಂದಿಗೆ ವನವಾಸಕ್ಕಾಗಿ ಕಾಡಿಗೆ ಹೋದಾಗ ಆಕೆಗೆ ಆಶ್ರಯ ನೀಡಿದ ವ್ಯಕ್ತಿ ಎಂದರು.

ರಾಮಾಯಣ ಕಾವ್ಯ ರಚಿಸಿದ ವಾಲ್ಮೀಕಿ ಎಲ್ಲರಿಗೂ ಆದರ್ಶ. ಭಾರತದಲ್ಲಿ ಸುಮಾರು ಜಾತಿ ಪಂತಗಳಿವೆ.  ವಾಲ್ಮಿಕಿ ಸಮುದಾಯದ ಯುವಕರು ವಿದ್ಯಾಭ್ಯಾಸದ ಕಡೆ ಗಮನ ಕೊಡುವುದಿಲ್ಲ ದಯವಿಟ್ಟು ಯುವಕರು ರಾಮಾಯಣ ಮಹಾಭಾರತ ಸ್ಪೂರ್ತಿ ತುಂಬಿ ಯುವಕರು ಜೀವನದಲ್ಲಿ ಮುಂದೆ ಬರಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್  ಅಣ್ಣಾರಾವ ಪಾಟೀಲ್ ವಹಿಸಿಕೊಂಡರು. ಕಾಶಿನಾಥ್ ಜಮಾದಾರ ಅಧ್ಯಕ್ಷರು, ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ಆಳಂದ, ಮಾನಪ್ಪ ಕಟ್ಟಿಮನಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಆಳಂದ, ವಿಜಯಲಕ್ಷ್ಮಿ ಹೊಳಕರ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಆಳಂದ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪಿ ಜಿ ಹಳ್ಳದ ಉಪಸ್ಥಿತರಿದ್ದರು ಲ. ಸಂಜಯ ಪಾಟೀಲ ಪ್ರಾಚಾರ್ಯರು ಸಂಬುದ್ಧ ಪದವಿ ಮಹಾವಿದ್ಯಾಲಯ ಆಳಂದ ಉಪನ್ಯಾಸ ನೀಡಿದರು ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿದರು.


Share It

You cannot copy content of this page