ರಾಜಕೀಯ ಸುದ್ದಿ

ಮಾಜಿ ಶಾಸಕ ಸುಭಾಷ್ ಗುತ್ತೇದಾರ ಹೇಳಿಕೆಗೆ ತಿರುಗೇಟು: ಸೋಲಿನ ಹತಾಶೆಯ ಹೇಳಿಕೆ

Share It


ಅಳಂದ: ಬಿ.ಆರ್. ಪಾಟೀಲ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮಾಜಿ ಶಾಸಕ ಸುಭಾಷ್ ಗುತ್ತಿಗೆದಾರ್ ಅವರದ್ದು ಸೋಲಿನ ಹತಾಶೆ ಎಂದು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಶರಣಬಸಪ್ಪ ವಾಗೆ ತಿಳಿಸಿದರು.

ಅಧಿಕಾರಿಗಳ ನಿಷ್ಕಾಳಜಿಯಿಂದ ರೈತರಿಗೆ ಸರಿಯಾದ ಪ್ರಾಮಾಣದಲ್ಲಿ ಬೆಳೆವಿಮೆ ಪರಿಹಾರ ವಿತರಣೆ ಯಾಗುತ್ತಿಲ್ಲಾ, ಕೆಲವು ಹೊಬಳಿಗಳಲ್ಲಿ ಮಾತ್ರ ಬೆಳೆವಿಮೆ ಮಂಜೂರಾಗುತ್ತಿದೆ. ಇದಕ್ಕೆ ಶಾಸಕ ಬಿ.ಆರ್.ಪಾಟೀಲ್‌ ತಮಗೆ ಮತ ಕಡಿಮೆ ಬಂದ ಹೊಬಳಿ ಹಾಗೂ ಗ್ರಾಮಗಳಿಗೆ ಸೂಕ್ತ ಬೆಳೆವಿಮೆ ಮಾಡಬಾರದೆಂದು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತೀದ್ದಾರೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಹೇಳಿಕೆ ನೀಡಿದ್ದರು.

ಇದಕ್ಕೆ ಖಂಡನೆ ವ್ಯಕ್ತಪಡಿಸಿದ ವಾಗೆ ಅವರು, ಇದು ಸೋಲಿನ ಹತಾಶೆಯಿಂದ ಹೇಳಿಕೆ ನೀಡುತ್ತಿರುವುದು, ತಾಲೂಕಿನ ಜನರಿಗೆ ದಿಕ್ಕು ತಪ್ಪಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕೆಲಸ ಮಾಡದ ಮಾಜಿ‌ ಶಾಸಕರು ಕ್ಷೇತ್ರದ ಅಭಿವೃದ್ಧಿ ಸಹಿಸದೆ ಕೆಲಸ ಮಾಡುತ್ತಿರುವ ಆರೋಪ ಇದಾಗಿದೆ ಎಂದು ತಿಳಿಸಿದರು.

ಅದರಂತೆ ಕೇಂದ್ರ ಸರ್ಕಾರ ಉದ್ದು, ಹೆಸರು, ಸೋಯಾಬಿನ್ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದರು. ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆಗೆದಿಲ್ಲ ಎಂದು ಆರೋಪಿಸಿತ್ತಿರುವ ಮಾಜಿ ಶಾಸಕರು ಈಗಾಗಲೇ ತೊಗರಿ ಮಂಡಳಿ ವತಿಯಿಂದ ವ್ಯವಸಹಾಯ ಸೇವಾ ಸಹಕಾರ ಸಂಘಗಳ ದಾಖಲೆಗಳನ್ನು ತೆಗೆದುಕೊಂಡು ಖರೀದಿ ಕೇಂದ್ರಕ್ಕೆ ಪರವಾನಿಕೆ ಕೊಡಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಗುರು ಪಾಟೀಲ್‌, ಮಾಜಿ ಉಪಾದ್ಯಕ್ಷರು, ತಾಲೂಕ ಪಂಚಾಯತಿ ಆಳಂದ, ಪ್ರಕಾಶ ಶಿಂಧೆ, ಕಾಂಗ್ರೆಸ್‌ ಉಪಾದ್ಯಕ್ಷರು ಮಾ.ಹಿ ಬ್ಲಾಕ್ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು


Share It

You cannot copy content of this page