ಅಪರಾಧ ಸುದ್ದಿ

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 6 ವಿಮಾನಗಳಲ್ಲಿ 12 ಬಾಂಬ್ ?

Share It

ಬೆಂಗಳೂರು: ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ ಪ್ರಯಾಣ ಆರಂಭಿಸುವ ವಿಮಾನಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಬಂದಿದೆ.

ಈ ವಾರದಲ್ಲಿ ಎರಡನೇ ಬಾರಿಗೆ ಇಂತಹ ಬೆದರಿಕೆ ಸಂದೇಶ ಬರುತ್ತಿದ್ದು, ಅನಾಮದೇಯ ಖಾತೆಯೊಂದರಿಂದ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್ ಗೆ ಸಂದೇಶ ಕಳುಹಿಸಲಾಗಿದೆ.

ಮಂಗಳೂರಿನಿಂದ ದುಬೈಗೆ, ಬೆಂಗಳೂರಿನಿಂದ ಮಸ್ಕಟ್ ಗೆ ತೆರಳುವ ವಿಮಾನಗಳು ಸೇರಿ ಒಂಬತ್ತು ವಿಮಾನಗಳಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಬೆದರಿಕೆ ಹಾಕಲಾಗಿದೆ. ಪ್ರತಿ ವಿಮಾನದಲ್ಲಿ ಇಬ್ಬರು ಬಾಂಬರ್ ಗಳು ಇದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.

ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದು ತಪಾಸಣೆಯನ್ನು ಹೆಚ್ಚಿಸಿದ್ದಾರೆ. ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಮೂಕದ್ದಮೆ ದಾಖಲು ಮಾಡಲಾಗಿದೆ.


Share It

You cannot copy content of this page