ಯಾದಗಿರಿ : ಗಣಪತಿ ಮೆರವಣಿಗೆ ವೇಳೆ ಜಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಿಂದೂಪರ ಭಾಷಣಕಾರ ಶ್ರೀರಾಮಸೇನೆ ಸಿದ್ಧಲಿಂಗಯ್ಯಸ್ವಾಮಿ( ಆಂದೋಲ ಶ್ರೀ)ಅವರಿಗೆ ಶಹಾಪುರ ತಾಲೂಕು ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಸೆ. 20 ರಂದು ರಾತ್ರಿ 12 ಗಂಟೆಯಿಂದ ಸೆ. 22ರ ಮಧ್ಯಾಹ್ನ 2 ಗಂಟೆಯ ವರೆಗೆ ಸಿದ್ದಲಿಂಗಯ್ಯ (ಆಂದೋಲ ಶ್ರೀ) ಅವರಿಗೆ ಶಹಾಪುರ ತಾಲೂಕು ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ ಸೆಕ್ಷನ್ 133, 143, 144ಎ ರನ್ವಯ ನಿರ್ಬಂಧ ಜಾರಿಗೊಳಿಸಿ ಡಿಸಿ ಸುಶೀಲಾ ಬಿ ಅವರು ಆದೇಶಿಸಿದ್ದಾರೆ.